ಮೆಥೋಡಿಸ್ಟ್ ಚರ್ಚ್‌ಗೆ ಶಿವನಗೌಡ ನಾಯಕ ಭೇಟಿ – ಚರ್ಚ್ ಅಭಿವೃದ್ದಿಗೆ ಅನುದಾನ

ಸಿರವಾರ.ನ೬-ಸಿರವಾರ ಸುತ್ತಮುತ್ತಲಿನ ತಾಲೂಕ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಕೇಂದ್ರ ಸ್ಥಾನವಾಗಿದ್ದೂ ಇಂತಹ ಪಟ್ಟಣದಲ್ಲಿ ಸುಂದರವಾದ ಚರ್ಚ್ ನಿರ್ಮಾಣವಾಗಿರುವುದು ಸಂತೋಷದ ವಿಷಯ, ಚರ್ಚ್ ಅಭಿವೃದ್ಧಿ ಕೆಲಸಗಳಿಗೆ ಮುಂದಿನ ದಿನಗಳಲ್ಲಿ ಕೈಲಾದಷ್ಟು ಅನುದಾನ ನೀಡುತ್ತೆನೆ ಎಂದು ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ದೇವದುರ್ಗ ಶಾಸಕರಾದ ಕೆ.ಶಿವನಗೌಡ ನಾಯಕರು ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಮೆಥೋಡಿಸ್ಟ್ ಚರ್ಚ್‌ಗೆ ಇತ್ತಿಚೇಗೆ ಭೇಟಿ ನೀಡಿ ಮಾತನಾಡಿದ ಅವರು ಭಕ್ತರು ವಿವಿಧ ರಾಜಕೀಯ ಮುಖಂಡರ ಆರ್ಥಿಕ ಸಹಾಯದಿಂದ ಸುಂಧರವಾದ ಚರ್ಚ್ ನಿರ್ಮಿಸಿಕೊಂಡಿದ್ದಾರೆ. ಸಾವಿರಾರು ಭಕ್ತರು ಸೇರಿ ಪ್ರಾರ್ಥಿಸುವ ಸ್ಥಳವು ದೊಡ್ಡದಾಗಿದೆ. ಇದೇ ತಿಂಗಳು ೧೦ ರಂದು ಆಲಯ ಉದ್ಘಾಟನೆ ಎಂದು ಮುಖಂಡರು ಬರುವಂತೆ ಆಹ್ವಾನ ನೀಡಿದ್ದಾರೆ. ಅಂದು ಬಿಡುವು ಮಾಡಿಕೊಂಡು ಬರುತ್ತೆನೆ. ಮುಂದಿನ ದಿನಗಳಲ್ಲಿ ಚರ್ಚ್ ಅಭಿವೃದ್ಧಿ ಕೆಲಸಕ್ಕೆ ಅನುದಾನ ನೀಡಲಾಗುವುದು. ಚರ್ಚ್‌ಗೆ ಬಂದಿರುವ ರಾಜಕೀಯ ವಿಷಯ ಮಾತನಾಡುವುದು ಬೇಡ.
ದೇವದುರ್ಗ ತಾಲೂಕಿಗೆ ಮಂಜೂರು ಆಗಿರುವ ವಿಶೇಷ ಅನುದಾನದ ಕಾಮಗಾರಿಗಳಿಗೆ ಮುಂದಿನ ತಿಂಗಳು ೧೦ ಜನ ಸಚಿವರನ್ನು ಕರೆತಂದು ನೂತನ ಕಾಮಗಾರಿಗೆ ಚಾಲನೆ, ಪೂರ್ಣಗೊಂಡಿರುವ ಕಾಮಗಾರಿ ಉದ್ಘಾಟಿಸಲಾಗುವುದು ಎಂದರು.
ಜಿಲ್ಲಾ ಮೇಲ್ವಿಚರಕಾರದ ಎ.ದೇವದಾನ್, ಸಭಾಪಾಲಕರಾದ ಸಂಸನ್ ಡ್ಯಾನೀಯಲ್ ಶಾಸಕರಿಗೆ ಒಳೇಯದು ಮಾಡು ಎಂದು ಪ್ರಾರ್ಥಿಸಿದರು. ಮಾನ್ವಿ ಬಿಜೆಪಿ ಮಂಡಲ ಅದ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ದೇವದುರ್ಗ ಬಿಜೆಪಿ ಮಂಡಲಾದ್ಯಕ್ಷ ಜಂಬಣನಿಲೋಗಲ್, ದೇವರಾಜ ಹಿರೇಮಠ,ರಾಮಚಂದ್ರ, ಎಂ.ಬಸವರಾಜ, ಉಮೇಶ ಜೇಗರಕಲ್, ಮಿತುನ್ ಚ್ಯಾಗಿ, ಪ.ಪಂ ನಾಮನಿರ್ಧೇಶಕರಾದ ಅಜೀತ್ ಹೊನ್ನಟಗಿ, ಮಹೇಶ ಪಾಟೀಲ್,ಚರ್ಚ್ ಮುಖಂಡರಾದ ಬಡ್ಡಹನುಮಂತ, ಎಂ.ಪ್ರಕಾಶ, ರಾಜಪ್ಪಹೊನ್ನಟಗಿ, ಜೆ.ಅಬ್ರಾಹಂ, ದೇವಿಪುತ್ರಪ್ಪ, ಸ್ಯಾಮೇಲಪ್ಪ, ಮತ್ತಾಯಪ್ಪ, ರಾಮಯ್ಯಬೈನೇರ್, ಗ್ಯಾನಪ್ಪ ಸೇರಿದಂತೆ ಇನ್ನಿತರರು ಇದ್ದರು.