ಮೆಣಸಿನಕಾಯಿ ಲಾರಿಗೆ ಬೆಂಕಿ

ಬಳ್ಳಾರಿ ಮಾ 23 : ಇಲ್ಲಿಗೆ ಸಮೀಪದ ಕುರುಗೋಡು ತಾಲೂಕಿನ ಏಳುಬೆಂಚೆ ಗ್ರಾಮದಲ್ಲಿ ಇಂದು ಮಧ್ಯಾಹ್ನ ವಿರುಪಾಕ್ಷಯ್ಯ ಸ್ವಾಮಿ ಎಂಬ ರೈತ ಸಂಗ್ರಹಿಸಿ ಲಾರಿಗೆ ಲೋಡ್ ಮಾಡಿದ್ದ ಅಂದಾಜು 400 ಚೀಲ ಮೆಣಸಿನಕಾಯಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದೆ.
ತಕ್ಷಣ ಕುಡತಿನಿಯ ಹತ್ತಿರ ವಿರುವ ಬಳ್ಳಾರಿ ಶಾಖೋತ್ಪನ್ನ ಕೇಂದ್ರದ ಅಗ್ನಿ ಶಾಮಕ ವಾಹನ ಬಂದು ಬೆಂಕಿಯನ್ನು ಹಾರಿಸಲು ಮುಂದಾದರು.

ಅದಕ್ಕೂ ಮುನ್ನ ಗ್ರಾನದ ಜನತೆ ಆದಷ್ಟು ಬೆಂಕಿ ನಂದಿಸಲು ಹರಸಾಹಸ ಪಟ್ಟರು.ಅಂದಾಜು ಸುಮಾರು 15 ಲಕ್ಷ ರೂಪಾಯಿಯ ನಷ್ಟ ಆಗಿದೆ ಎಂದು ತಿಳಿದುಬಂದಿದೆ