ಮೆಣಸಿನಕಾಯಿ ಉಳಿಸಿಕೊಳ್ಳಲು ರೈತರ ಪ್ರಯತ್ನ


ಲಕ್ಷ್ಮೇಶ್ವರ,ಅ.19: ತಾಲೂಕಿನಲ್ಲಿ ತೋಟಗಾರಿಕಾ ಬೆಳೆಯಾದ ಮೆಣಸಿನಕಾಯಿ ಗಿಡವನ್ನು ಉಳಿಸಿಕೊಳ್ಳಲು ಕೊನೆಯ ಪ್ರಯತ್ನವಾಗಿ ರೈತರು ಟ್ಯಾಂಕರ್ ಗೆ ತುಂತುರು ನೀರಾವರಿ ಮೂಲಕ ಉಳಿಸಿಕೊಳ್ಳುವ ಹರ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಕಳೆದ ಎರಡು ತಿಂಗಳನಿಂದ ಮಳೆ ಕೈಕೊಟ್ಟಿದ್ದರಿಂದ ರೈತರು ಈಗ ಕೊನೆಯದಾಗಿ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಈಗಾಗಲೇ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿರುವ ರೈತರು ಮೆಣಸಿನ ಗಿಡ ಉಳಿದರೆ ಒಂದಿಷ್ಟು ಆದಾಯ ಬಂದಿತು ಎಂಬ ನಿರೀಕ್ಷೆಯಲ್ಲಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ಯೇ ಏಪ್ರಿಲ್ ಮೇ ತಿಂಗಳಿನ ಬಿಸಿಲಿನ ಅನುಭವವಾಗುತ್ತಿದ್ದು ಗಿಡಗಳು ಹುಲುಸಾಗಿ ಬೆಳೆದು ನಿಂತಿದ್ದರೂ ಮಳೆ ಕೈಕೊಟ್ಟಿದ್ದರಿಂದ ಗಿಡಗಳಲ್ಲಿ ಕೇವಲ ಎರಡು ಮೂರು ಕಾಯಿಗಳು ಕಾಣುತ್ತಿದ್ದು ಅವು ಸಹ ತೇವಾಂಶದ ಕೊರತೆಯಿಂದ ಉದುರಿ ಹೋಗಬಾರದು ಎಂಬ ದೃಷ್ಟಿಯಿಂದ ನೀರು ಪೂರೈಕೆಗೆ ರೈತರು ಮುಂದಾಗಿದ್ದಾರೆ.
ತಾಲೂಕಿನಲ್ಲಿ ಲಕ್ಷ್ಮೇಶ್ವರ ರಾಮಗಿರಿ ಬಸಾಪುರ ಗೋನಾಳ ಶಿಗ್ಲಿ ಅಡರಕಟ್ಟಿ ಬಟ್ಟೂರು ಬಡ್ನಿ ಗೊಜನೂರು ಮಾಡಳ್ಳಿಯಳವತ್ತಿ ಯತ್ನಳ್ಳಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಬೆಳೆಯುವ ಮೆಣಸಿನಕಾಯಿ ಬೆಳೆ ಈಗ ರೈತರ ಪಾಲಿಗೆ ಅದು ಕೂಡ ದಕ್ಕದ ಸ್ಥಿತಿಯಲ್ಲಿದೆ.
ತಾಲೂಕಿನ ಲಕ್ಷ್ಮೇಶ್ವರ ರೈತರದ ಮಂಜುನಾಥ್ ನರೇಗಲ್ಲ ಮತ್ತು ಸೋಮಣ್ಣ ನರೇಗಲ್ಲ ಸಹೋದರರು ಎಂಟು ಎಕರೆ ಪ್ರದೇಶದಲ್ಲಿನ ಮೆಣಸಿನಕಾಯಿ ಗಿಡವನ್ನು ಉಳಿಸಿಕೊಳ್ಳಲು ಈಗ ಟ್ಯಾಂಕರ್ ಮೂಲಕ ನೀರು ಹಾಯಿಸುವ ಕೆಲಸ ಅನಿವಾರ್ಯವಾಗಿದೆ.
ಈಗಾಗಲೇ ಸುಮಾರು ಒಂದು ಲಕ್ಷ ಅರವತ್ತು ಸಾವಿರ ಖರ್ಚು ಮಾಡಿರುವ ಸಹೋದರರು ಈಗ ಮತ್ತೆ ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ಎಂದು ಸುಮಾರು 30 ಸಾವಿರ ಖರ್ಚು ಮಾಡಿ ಬೆಳೆಸಿದ ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹಾಯಿಸುವ ಕೆಲಸ ಮಾಡುತ್ತಿದ್ದಾರೆ.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್ ಕುಂಬಾರ್ ಅವರ ಹೇಳಿಕೆಯ ಪ್ರಕಾರ ತಾಲೂಕಿನಲ್ಲಿ 4500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮೆಣಸಿನ ಗಿಡ ತೊಂಬತ್ತರಷ್ಟು ಹಾನಿ ಉಂಟಾಗಿದ್ದು ಬೆಳೆ ಕಂಡು ಬಂದರು ಇಳುವರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬರುವ ನಿರೀಕ್ಷೆ ಇದೆ .
ಇದೇ ರೀತಿ ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ಬಹುತೇಕ ತೋಟಗಾರಿಕಾ ಬೆಳೆಯನ್ನು ಸಂಪೂರ್ಣ ಕಳೆದುಕೊಳ್ಳಲಿದ್ದಾರೆ ಎಂದರು ಆದಾಗಿಯೂ ಸಹಿತ ರೈತರು ಟ್ಯಾಂಕರ್ ಮೂಲಕ ನೀರುಣಿಸುವ ಕೆಲಸಕ್ಕೆ ರೈತರು ಮುಂದಾಗಿರುವುದು ಕಂಡು ಬರುತ್ತಿದೆ.