ಮೆಣಸಿನಕಾಯಿ ಆವಕ ಭಾರೀ ಹೆಚ್ಚಳ

ಬ್ಯಾಡಗಿ,ಮಾ19: ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಗುರುವಾರ 2.19ಲಕ್ಷ ಚೀಲ ಮೆಣಸಿನಕಾಯಿ ಬಂದಿದ್ದು, ಆವಕದಲ್ಲಿ ಭಾರೀ ಹೆಚ್ಚಳ ಕಂಡಿದೆ.
ಕಳೆದ ಒಂದು ತಿಂಗಳಿನಿಂದ ಪ್ರತಿ ವಾರವೂ 2ಲಕ್ಷಕ್ಕೂ ಹೆಚ್ಚು ಮೆಣಸಿನಕಾಯಿ ಚೀಲಗಳು ಆವಕವಾಗುತ್ತಿದ್ದು, ಈ ವಾರವೂ ಸಹ 2.19 ಲಕ್ಷಗಳಿಗೂ ಹೆಚ್ಚು ಮೆಣಸಿನಕಾಯಿ ಚೀಲಗಳು ಆವಕವಾದ ಹಿನ್ನಲೆಯಲ್ಲಿ ಗುರುವಾರ ಮಾರುಕಟ್ಟೆ ಪೂರ್ಣ ತುಂಬಿ ತುಳುಕುವಂತಾಗಿತ್ತು. ಒಂದು ತಿಂಗಳ ಹಿಂದೆ ಮಾರುಕಟ್ಟೆಗೆ ಬಂದಿದ್ದ 2.49ಲಕ್ಷ ಮೆಣಸಿನಕಾಯಿ ಚೀಲಗಳ ಅವಕ ಪ್ರಮಾಣ ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ಆವಕದ ದಾಖಲೆಯಾಗಿದೆ.
ದರದ ಪ್ರಮಾಣ…!!
ಬ್ಯಾಡಗಿ ಕಡ್ಡಿ ತಳಿ ಕ್ವಿಂಟಾಲಗೆ ಕನಿಷ್ಠ 1029, ಗರಿಷ್ಠ 24500 ಹಾಗೂ ಮಾದರಿ 11389 ರೂ, ಡಬ್ಬಿ ತಳಿ ಕನಿಷ್ಠ 1509, ಗರಿಷ್ಠ 32119, ಮಾದರಿ 14269 ರೂ, ಗುಂಟೂರು ತಳಿ ಕನಿಷ್ಠ 700, ಗರಿಷ್ಠ 10509 ಹಾಗೂ ಮಾದರಿ 4410 ರೂಗಳಿಗೆ ಮಾರಾಟವಾಗಿವೆ.