ಮೆಡಿಸನ್ ಮಾಫಿಯಾ ನಿಯಂತ್ರಣಕ್ಕೆ ಮನವಿ

ದಾವಣಗೆರೆ.ಮೇ.೫: ನಮ್ಮ ದೇಶ ಹಾಗೂ ರಾಜ್ಯಗಳಲ್ಲಿ ಕೋವಿಡ್ ಎಂಬ ಮಹಾ ಮೆಡಿಷನ್ ಮಾಫಿಯಾದಿಂದ ದೇವರೆಂದು ಕಾಣುವ ವೈದ್ಯೋಪಚಾರವು ಬಡವರ ಪಾಲಿಗೆ ನರಕವಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳು ಯಮನ ಕೂಪಕ್ಕೆ ಸಾಕ್ಷಿಯಾಗುತ್ತಿವೆ. ಇನ್ನೂ ನಮ್ಮ ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಸರ್ವೆಂಟ್‌ನಿಂದ ಹಿಡಿದು ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿವರೆಗೂ ಬಡರೋಗಿಗಳ ರಕ್ತ ಹೀರುವಂತಾಗಿದೆ ಎಂದು ಕರ್ನಾಟಕ ಏಕತಾ ವೇದಿಕೆಯ ಮಂಜುನಾಯ್ಕ ಜಿ. ಹೇಳಿದ್ದಾರೆ.ಇಲ್ಲಿ ಒಂದು ಕ್ಯಾನಲ್‌ನಿಂದ ಹಿಡಿದು ಆ್ಯಂಟಿ ಬಯೋಟಿಕ್ ಇಂಜೆಕ್ಷನ್, ಮಾಸ್ಕ್, ಔಷಧಗಳನ್ನು ಹೊರಗಡೆಯಿಂದ ತರಿಸಲಾಗುತ್ತದೆ. ಎಕ್ಸರೇ, ಸ್ಕಾö್ಯನಿಂಗ್ ಮುಂತಾದವುಗಳಿಗೂ ರಾಜಾರೋಷವಾಗಿ 200, 300, 500 ರೂ. ಪಡೆಯಲಾಗುತ್ತಿದೆ. ಬೆಡ್ ಬದಲಾಯಿಸಲು 100 ರೂ. ಆಕ್ಸಿಜನ್ ಬೆಡ್ ಅಡ್ಮಿಷನ್ ಹೆಸರಲ್ಲಿ 1000 ರೂ. ಆಕ್ಸಿಜನ್ ಬೆಡ್‌ಗೆ 2000 ಪೇಷಂಟ್ ಕೂರಿಸಿ ತಳ್ಳುವ ಗಾಡಿಯವರಿಗೂ 50 ರಿಂದ 100 ರೂ. ಬಾಗಿಲಲ್ಲಿ ಕೂತ ವಾಚ್‌ಮನ್ ಸಹ 50 ರೂ. ಕೇಳುವ ಪರಿಸ್ಥಿತಿ ಎದುರಾಗಿದೆ. ಇನ್ನು ಮನೆಯಲ್ಲಿ ಕೋವಿಡ್ ಐಸೋಲೇಷನ್ ಇರುವವರ ಹೆಸರಲ್ಲೂ ಬೆಡ್ ಖಾಲಿ ಇಟ್ಟುಕೊಂಡು ಬಡರೋಗಿಗಳಿಗೆ ಬೆಡ್ ಖಾಲಿ ಇಲ್ಲ ಎಂದು ಹೇಳಿ ಕಳುಹಿಸಲಾಗುತ್ತಿದೆ. ವೀಣಾ ಎಂಬ 9 ತಿಂಗಳ ತುಂಬು ಗರ್ಭಿಣಿ ಸಿ.ಜಿ. ಆಸ್ಪತ್ರೆಯಿಂದ ಹಿಂದಿನ ಬಾಪೂಜಿ ಆಸ್ಪತ್ರೆಗೆ ಆಕ್ಸಿಜನ್ ಸಹಿತ ಕರೆದೊಯ್ಯಲು 5000ರೂ. ಪಡೆದಿದ್ದನ್ನು ಅವರ ಪತಿ ಗೋಳಾಡಿಕೊಂಡಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಆಂಬುಲೆನ್ಸ್ಗಳಿದ್ದರೂ ಏಕೆ ಈ ರೀತಿ ಖಾಸಗಿ ಆಂಬುಲೆನ್ಸ್ಗಳ ಹಾವಳಿ ಹೆಚ್ಚಾಗಿದೆ. ಹಾಗೆಯೇ ಪ್ರಾಮಾಣಿಕ ನರ್ಸ್ಗಳನ್ನು ಸೂಪರ್‌ಡೆಂಟ್‌ಗಳು ಕಳೆದ ವರ್ಷದಿಂದಲೂ ಕೆಲವೊಂದು ಸಿಬ್ಬಂದಿಯನ್ನು ಮಾತ್ರ ಪದೆ ಪದೇ ಎಂ.ಐ.ಸಿ.ಯು., ಐ.ಸಿ.ಯು. ಗಳಲ್ಲಿ ಕೆಲಸ ನಿರ್ವಹಿಸಲು ಆದೇಶ ನೀಡಿ ಮತ್ತೆ ಕೆಲ ಆಪ್ತ ನರ್ಸ್ಗಳಿಗೆ ರಜೆ ನೀಡುವುದು, ಓಪಿಡಿ ಇತರೆ ಭಾಗಗಳಲ್ಲಿ ಕೆಲಸ ನೀಡಲಾಗುತ್ತಿದೆ. ಇನ್ನು ಕೆಲ ಸಿಬ್ಬಂದಿಗಳು ಬೆಳಿಗ್ಗೆ 8 ಮಧ್ಯಾಹ್ನ 2 ಹಾಗೂ ರಾತ್ರಿ 8 ಕ್ಕೆ ಮೂರು ಶಿಫ್ಟ್ಗಳಲ್ಲಿ ಸರಿಯಾದ ಸಮಯಕ್ಕೆ ಹಾಜರಾಗದೆ ಒಂದು ಗಂಟೆ, 2 ಗಂಟೆ ತಡವಾಗಿ ಬರುತ್ತಿರುವುದು ರೋಗಿಗಳ ನಿರ್ವಹಣೆ ಗೊಂದಲವಾಗಿದೆ. ಕೋವಿಡ್ ರೂಂಗಳ ಸಂಖ್ಯೆ ಹೆಚ್ಚಾದರೂ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳದೇ 40 ರಿಂದ 50 ಪೇಷಂಟ್‌ಗಳನ್ನು ಒಬ್ಬೊಬ್ಬ ನರ್ಸ್ಗಳು ಮಾತ್ರ ನೋಡಿಕೊಳ್ಳುವ ಸ್ಥಿತಿ ಎದುರಾಗಿದೆ. ಆಸ್ಪತ್ರೆಯ ಕೆಲ ಔಷಧ ಮತ್ತು ಇಂಜೆಕ್ಷನ್‌ಗಳನ್ನು ಕೆಲವು ಸಿಬ್ಬಂದಿಗಳು ಕಾಳಸಂತೆಯಲ್ಲಿ ಮಾರುತ್ತಿದ್ದು ಅಂತವರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ಒಟ್ಟಿನಲ್ಲಿ ಆಡಳಿತಾತ್ಮಕ ಹಾಗೂ ಸಿಬ್ಬಂದಿ ನಿರ್ವಹಣೆ ತುಂಬಾ ಕಳಪೆಯಾಗಿರುವುದು ವಿಷಾದನೀಯ. ಇನ್ನೂ ಕೋವಿಡ್ ಪ್ರಾರಂಭವಾದಾಗಿನಿAದ ಸಾಕಷ್ಟು ವೈದ್ಯಕೀಯ ಸೌಲಭ್ಯಗಳು ಹೆಚ್ಚಾಗಿರುವುದು ಆಶಾದಾಯಕವಾಗಿದೆ. ಇನ್ನೂ ಕೆಲ ಮಲ್ಲೇಶ್ ಎರಿಯಪ್ಪ, ಪ್ರದೀಪ್, ಯಾಕುಬ್‌ಖಾನ್, ರುದ್ರಮುನಿ ರಾಘವೇಂದ್ರನಾಗಿಹಳ್ಳಿ, ಗೀತ, ಜಯಶೀಲರೆಡ್ಡಿಯಂತಹ ಕೆಲ ನರ್ಸ್ಗಳು ತಮ್ಮ ಜೀವದ ಹಾಗೂ ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ದಯಮಾಡಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಧಿಕಾರಿಗಳು ಇಂತಹ ಸಣ್ಣ ಸಣ್ಣ ವಿಚಾರಗಳನ್ನು ಸೂಕ್ಷö್ಮವಾಗಿ ಗಮನಿಸಿ ಸರಿಪಡಿಸಿ ಹಾಗೂ ಗುತ್ತಿಗೆ ಆಧಾರಿತ ಕೋವಿಡ್ ಸಿಬ್ಬಂದಿಗಳಿಗೆ ಕಳೆದ 5 ತಿಂಗಳಿAದ ವೇತನವಿಲ್ಲದೆ ಅವರವರ ಕುಟುಂಬ ನಿರ್ವಹಣೆ ಕಷ್ಟಕರವಾಗಿದ್ದು, ವೇತನ ಆದಷ್ಟು ಬೇಗ ಮಂಜೂರು ಮಾಡಬೇಕು. ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಲಾಕ್‌ಡೌನ್‌ನಿಂದ ತಮ್ಮ ತಮ್ಮ ಕೆಲಸಕ್ಕೆ ದೂರ ದೂರದ ಹಳ್ಳಿಗಳಿಂದ ಹಾಗೂ ನಗರದ ಮೂಲೆ ಮೂಲೆಯಿಂದ ಬಂದು ಕೆಲಸ ಮಾಡುವವರಿಗೆ ಸಾರಿಗೆ ಸೌಲಭ್ಯ ಒದಗಿಸಿ ಬಡವರ ಆಶಾಕಿರಣವಾದ ಸರ್ಕಾರಿ ಆಸ್ಪತ್ರೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ತಮ್ಮಲ್ಲಿ ವಿನಂತಿಸುತ್ತೇವೆ.