ಮೆಡಿಕಲ್ ಶಾಪ್‍ಗೆ ಬೆಂಕಿ: 1 ಲಕ್ಷ ರೂ.ಮೌಲ್ಯದ ಔಷಧಿ ಭಸ್ಮ

ಕಲಬುರಗಿ,ಮೇ.24-ಇಲ್ಲಿನ ಸಂಗಮೇಶ್ವರ ನಗರದ ಶಿವ ಮೆಡಿಕಲ್ ಶಾಪ್‍ನಲ್ಲಿ ಇಂದು ಬೆಳಗಿನಜಾವ 2 ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಬೆಂಕಿ ಹೊತ್ತಿಕೊಂಡು ಔಷಧಿಗಳು ಸುಟ್ಟು ಹೋಗಿದ್ದು, 1 ಲಕ್ಷ ರೂ.ಹಾನಿ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಸುದ್ದಿ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದೆ. ಅಗ್ನಿ ಶಾಮಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಘವೇಂದ್ರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.