ಮೆಡಿಕಲ್ ಮಾಫಿಯಾ ಸುತ್ತಾ   `56′

* ಚಿ.ಗೋ ರಮೇಶ್

ಮೆಡಿಕಲ್ ಮಾಫಿಯಾದ ಕಥೆ ಹೊಂದಿರುವ ” 56″ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಟಿ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ,ತೆಲುಗು, ತಮಿಳು ಮತ್ತು ಮಲೆಯಾಳಂ‌ ಭಾಷೆಯಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ವಾಣಿಜ್ಯ‌ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಚಿತ್ರದ ಟ್ರೈಲರ್ ಬಿಡುಗಡೆ‌ ಮಾಡಿದ ಹಿರಿಯ ಸಿನಿಮಾ ಪ್ರಚಾರಕರ್ತ ನಾಗೇಂದ್ರ ಚಿತ್ರ‌ ಚೆನ್ನಾಗಿ ಮೂಡಿ ಬಂದಿದೆ ಒಳ್ಳೆಯದಾಗಲಿ.ಚಿತ್ರ ಶತದಿನೋತ್ಸವ ಆಚರಿಸಲಿದೆ ಎನ್ನುವ ಭವಿಷ್ಯ ನುಡಿದರು. ನಿರ್ದೇಶಕ ರಾಜೇಶ್ ಲೀಲಾ ಮಾತನಾಡಿ,  ನಿರ್ಮಾಪಕ ಪ್ರವೀಣ್ ರೆಡ್ಡಿ ಅವರೇ  ಕಥೆ ಚಿತ್ರಕಥೆ ಕಥೆ ಬರೆದಿದ್ದಾರೆ.

ಚಿತ್ರಕ್ಕೆ ನಟಿ ಪ್ರಿಯಾಮಣಿ ಅವರು  ಚಿನ್ನದ ಕಳಸವಿದ್ದಂತೆ  ಚಿತ್ರ  ಮೆಡಿಕಲ್ ಮಾಫಿಯಾದ ಸುತ್ತ ಸಾಗುವ  ಸೈಮ್ಸ್ ಫಿಕ್ಷನ್ ಕತೆ, ಹೊಸ ತಂಡಕ್ಕೆ ಎಲ್ಲರ ಶುಭ ಹಾರೈಕೆ ಇರಲಿ ಎಂದು ಕೇಳಿಕೊಂಡರು.

ನಟಿ ಪ್ರಿಯಾಮಣಿ, ಕಥೆ ಕೇಳಿ ಹೇಳಿದ ಹಾಗೆ ಮಾಡಿದರೆ ಸಿನಿಮಾ ಹಿಟ್ ಆಗಲಿದೆ ಎಂದು ಹೇಳಿದ್ದೆ‌ ಚಿತ್ರದ ಮೂಲಕ ಸಂದೇಶ ಚಿತ್ರದಲ್ಲಿದೆ .ಕಥೆ ಪವರ್ ಹೌಸ್ ಹೊರತು ನಾನಲ್ಲ. ಎಲ್ಲರ ಸಹಾಕರವಿರಲಿ ಎಂದರು.

ನಟ, ನಿರ್ಮಾಪಕ ಪ್ರವೀಣ್ ರೆಡ್ಡಿ,  ಡಿಆರ್ 56 ಚಿತ್ರದ ಕಥೆ  ಕೇಳಿ ಸಿನಿಮಾ ಮಾಡಲು ಮುಂದಾದೆವು. ಪ್ರಿಯಾಮಣಿ ಕಥೆ ಕೇಳಿ ಸುಮ್ಮನೆ ಇದ್ದರು. ಸಿನಿಮಾ ಒಪ್ಪಿಕೊಳ್ಳುತ್ತಾರೋ ಇಲ್ಲವೇ ಅನ್ನಿಸಿತ್ತು. ಅವರಿಲ್ಲದಿದ್ದರೆ ಸಿನಿಮಾ ಆಗ್ತಾ ಇತ್ತು ಎಲ್ಲಾ ಕಡೆ ಸಿನಿಮಾ ತಲುಪುತ್ತಿರಲಿಲ್ಲ ಎಂದು ಹೇಳಿದರು.

ರೂಪೇಶ್ ಕುಮಾರ್, ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದೇನೆ. ಚಿತ್ರ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದ್ದೇನೆ ಎಂದರು. ವೆಂಕಟ್ ಗೌಡ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿದ್ದು 150 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗೆಯಾಗಲಿದೆ ಎನ್ನುವ ಮಾಹಿತಿ ಹಂಚಿಕೊಂಡರು. ಛಾಯಾಗ್ರಾಹಕ ರಾಕೇಶ್ ಸಿ ತಿಲಕ್,  ಸಂಕಲನಕಾರ ವಿಶ್ವ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.