ಮೆಡಿಕಲ್‌ ಶಾಪ್‌, ತರಕಾರಿ ಅಂಗಡಿಗೆ ನುಗ್ಗಿ ಕಳವು

ಕಾಸರಗೋಡು, ಡಿ.೨೦- ಮೆಡಿಕಲ್ ಶಾಪ್ ಮತ್ತು ತರಕಾರಿ ಅಂಗಡಿಗೆ ನುಗ್ಗಿ ನಗದು ಕಳವುಗೈದ ಘಟನೆ ಕಾಸರಗೋಡು ನಗರದಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ಎಂ.ಜಿ ರಸ್ತೆಯಲ್ಲಿರುವ ಟಿ.ಎ ಅಬ್ದುಲ್ಲ ಅವರ ಮಾಲಕತ್ವದ ಮೆಡಿಕಲ್ ಶಾಪ್ ಮತ್ತು ಸಮೀಪ ಇರುವ ವಿಜಯನ್ ಎಂಬವರ ತರಕಾರಿ ಅಂಗಡಿಗೆ ನುಗ್ಗಿ ಕೃತ್ಯ ನಡೆಸಲಾಗಿದೆ. ಎರಡೂ ಅಂಗಡಿಯ ಹಿಂಬದಿಯ ಗೋಡೆ ಕೊರೆದು ಈ ಕೃತ್ಯ ನಡೆಸಲಾಗಿದೆ. ಬೆಳಗ್ಗೆ ಬಾಗಿಲು ತೆರೆದು ಒಳ ಬಂದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ಮೆಡಿಕಲ್ ಶಾಪ್ ನಲ್ಲಿದ್ದ 60 ಸಾವಿರ ರೂ. ನಗದು ಮತ್ತು ಅಂಗಡಿಯಲ್ಲಿದ್ದ ಆರು ಸಾವಿರ ರೂ. ನಗದು ಕಳವು ಮಾಡಲಾಗಿದೆ. ಕಾಸರಗೋಡು ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.