ಮೆಡಿಕಲ್ಸ್ ಬಾಗಿಲು: ಗ್ರಾಮಸ್ಥರ ಔಷಧಿ ಖರಿದಿಸಲು ಪರದಾಟ

ಹನೂರು: ಮೇ.13: ಶಾಸಕ ಆರ್.ನರೇಂದ್ರ ಅವರ ಸ್ವಗ್ರಾಮ ಕ್ಷೇತ್ರ ವ್ಯಾಪ್ತಿಯ ದೊಡ್ಡಿಂದುವಾಡಿ ಗ್ರಾಮದಲ್ಲಿರುವ ರವಿ ಮೆಡಿಕಲ್ಸ್ ಕಳೆದ 15 ದಿನಗಳಿಂದ ಬಾಗಿಲು ಮುಚ್ಚಿರುವುದರಿಂದ ಇಲ್ಲಿನ ಗ್ರಾಮಸ್ಥರು ಸೇರಿದಂತೆ ನೆರೆಹೊರೆಯ ಗ್ರಾಮಗಳು ಔಷಧಿ ಖರಿದಿಸಲು ಪರದಾಡುವಂತಾಗಿದೆ.
ದೊಡ್ಡಿಂದುವಾಡಿ ಗ್ರಾಮದಲ್ಲಿರುವ ರವಿ ಮೆಡಿಕಲ್ಸ್‍ಗೆ ಹತ್ತೀರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರು ಬರೆದು ಕಳುಹಿಸುವ ಕೆಲವೊಂದು ಔಷಧಗಳನ್ನು ಪಡೆಯಲು ಅನಾನುಕೂಲ ಉಂಟಾಗಿದೆ.
ಕೊರೊನಾದಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಲಾಕ್‍ಡೌನ್‍ನಿಂದ ಜನತೆ ಈಗಾಗಲೇ ಬಸವಳಿದು ಬೆಂಡಾಗಿದ್ದಾರೆ. ಈ ಮಧ್ಯೆ ಅನಾರೋಗ್ಯದ ಜೊತೆಗೆ ಔಷಧಿಗಳನ್ನು ಪಡೆಯಲು ಕಾಮಗೆರೆ ಅಥಾವ ಕೊಳ್ಳೇಗಾಲಕ್ಕೆ ತೆರಳುವ ಸಮಸ್ಯೆ ಉಂಟಾಗಿರುವುದರಿಂದ ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಕ್ರಮವಹಿಸಿ ಜನತೆಗೆ ಔಷಧಿಗಳು ದೊರೆಯುವಂತೆ ಮಾಡಬೇಕಾಗಿದೆ.
ಇಲ್ಲಿನ ಜನತೆ ಖಾಸಗಿ ಕ್ಲೀನಿಕ್ ಪಕ್ಕದ ಮೆಡಿಕಲ್ಸ್‍ಗಿಂತ ಹೆಚ್ಚಾಗಿ ರವಿ ಮೆಡಿಕಲ್ಸ್‍ನ್ನು ಅವಲಂಬಿಸಿದ್ದು ಶಾಸಕರು ಸಹ ಈ ಬಗ್ಗೆ ಗಮನಹರಿಸಿ ತಮ್ಮ ಸ್ವಗ್ರಾಮದ ಜನತೆಗೆ ಹತ್ತಿರದಲ್ಲಿ, ಸುಲಭವಾಗಿ ಔಷಧ ಸಿಗುವ ವ್ಯವಸ್ಥೆಯನ್ನು ತುರ್ತಾಗಿ ಕೈಗೊಳ್ಳಬೇಕಿದೆ.