ಮೆಟ್ಲಿಂಗ್ ಕಾಮಗಾರಿ ಕಳಪೆ- ತನಿಖೆಗೆ ಆಗ್ರಹ

ಸಿರವಾರ.ಮಾ೨೫- ಗ್ರಾಮದ ಜನರ ಬಹು ದಿನದ ಬೇಡಿಕೆ ಉತ್ತಮ ರಸ್ತೆ ನಿರ್ಮಾಣ, ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾದರೂ, ಜನಪ್ರತಿನಿಧಿಗಳ ನಿರ್ಲಕ್ಷ್ಯ, ಗುತ್ತಿಗೆದಾರರ ಹಣದ ಆಸೆಗಾಗಿ ಮೆಟ್ಲಿಂಗ್ ಕಾಮಗಾರಿ ಕಳಪೆ ಮಟ್ಟದಲ್ಲಿ ಮಾಡಿ, ಬಿಲ್ ಮಾಡಿಕೊಂಡಿದ್ದೂ, ಇದನ್ನು ತನಿಖೆ ಮಾಡುವಂತೆ ಗ್ರಾಮದ ಬಸವರಾಜಗೌಡ ಪಾಟೀಲ್ ಒತ್ತಾಯಿಸಿದರು.
ಸಮೀಪದ ದೇವದುರ್ಗ ತಾಲೂಕಿನ ನಾಗಡದಿನ್ನಿ ಗ್ರಾ.ಪಂ ವ್ಯಾಪ್ತಿಯ ಯರಮರಸ್ ಗ್ರಾಮದಲ್ಲಿ ಮೆಟ್ಲಿಂಗ್ ರಸ್ತೆ ನಿರ್ಮಾಣ ಕಾಮಗಾರಿಯು ೨೦೧೯-೨೦ ಹಾಗೂ ೨೦೨೦-೨೦೨೧ ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮೆಟ್ಲಿಂಗ ಕಾಮಗಾರಿಗಲ್ಲಿ ಬಹಳಷ್ಟು ಅವ್ಯವಹಾರ ಆಗಿದೆ, ಯರಮರಸ್ ಗ್ರಾಮದ ಮೂರು ಕಡೆಗಳಲ್ಲಿ ೨೦ ಲಕ್ಷ ಅನುದಾನದಲ್ ಮೆಟ್ಲಿಂಗ್ ರಸ್ತೆ ನಿರ್ಮಾಣ ಮಾಡಿದ್ದೂ, ಕೂಲಿ ಕಾರ್ಮಿಕರು ಮಾಡಬೇಕಾದ ಕೆಲಸವನ್ನು ಯಂತ್ರೋಪಕರಣಗಳಿಂದ ಮಾಡಿದ್ದಾರೆ. ಕಾಮಗಾರಿಗಳನ್ನು ಪೂರ್ಣಗೊಳಿಸದೆ ಅದಕ್ಕೆ ನಿಲ್ಲಿಸಿ ಸಂಪೂರ್ಣ ಬಿಲ್ ಮಾಡಿಕೊಂಡಿದ್ದಾರೆ.
ಕಾಮಗಾರಿ ಅಪೂರ್ಣವಾಗಿದ್ದರೂ ಬಿಲ್ ಮಾಡಿರುವುದು ಗಮನಿಸಿದರೆ ಇದರಲಲಿ ಪಿ.ಡಿ.ಓ, ಜೆ.ಇಗಳು ಶಾಮೀಲಾಗಿರುವು ಇದು ಕಂದು ಬರುತ್ತದೆ. ಈ ಕುರಿತು ಅನೇಕ ಬಾರಿ ಗಮನಕ್ಕೆ ತಂದರೂ ಅಧಿಕಾರಿಗಳು ವಿರುದ್ದ ಕ್ರಮ ಜರುಗಿಸುವಂತೆ ಜಿಲ್ಲಾ ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕೂಡಲೇ ಕ್ರಮಕೈಗೊಳದೆ ಇದ್ದರ ಗ್ರಾ.ಪಂ ಮುಂದೆ ಧರಣಿಯನ್ನು ಕೈಗೊಳಲಾಗುವುದು ಎಂದು ತಿಳಿಸಿದ್ದಾರೆ.