ಮೆಟ್ರೋದಲ್ಲಿ ತಾಂತ್ರಿಕ ದೋಷ ಪ್ರಯಾಣಿಕರ ಪ್ರರದಾಟ

ಬೆಂಗಳೂರು, ಜ. ೨೭-ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬೆಳ್ಳಂ ಬೆಳಗ್ಗೆ ನಮ್ಮ ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಉಂಟಾದ ಹಿನ್ನೆಲೆ ಪ್ರಯಾಣಿಕರು ಪರದಾಡುವಂತ ಸ್ಥಿತಿ ಉಂಟಾಯಿತು.ಶನಿವಾರ ನೇರಳೆ ಮಾರ್ಗದ ಮೆಟ್ರೋ ಮಾರ್ಗದಲ್ಲಿ ದಿಢೀರ್ ತಾಂತ್ರಿಕ ಸಮಸ್ಯೆಯಾಗಿದ್ದು, ಎಂ.ಜಿ ರಸ್ತೆ ಯಿಂದ ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ.ಇದರಿಂದ ಮೆಟ್ರೋ ಸಂಚಾರ ಇಲ್ಲದೇ ಮೆಟ್ರೋ ನಿಲ್ದಾಣಗಳಲ್ಲಿ ನಿಂತಲ್ಲೇ ನಿಂತ ಪ್ರಯಾಣಿಕರು ಪರದಾಡಿದರು.ಸುಮಾರು ಒಂದು ಗಂಟೆಯ ಅವಧಿಗೆ ಸೇವೆ ಲಭ್ಯ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಈ ದಿಢೀರ್ ನಿರ್ಧಾರದಿಂದಾಗಿ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಕೆಲ ಕಾಲ ಪರದಾಡಬೇಕಾಯಿತು.ಉಳಿದ ಮಾರ್ಗಗಳಲ್ಲಿ ಸಂಚಾರ ಎಂದಿನಂತೆ ಮುಂದುವರೆಯಲಿದೆ. ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಮಾತ್ರ ಲಭ್ಯವಿದೆ. ಹಸಿರು ಮಾರ್ಗದಲ್ಲಿ ರೈಲುಗಳು ಎಂದಿನಂತೆ ಸಂಚಾರ ಇರಲಿದೆ. ತಾಂತ್ರಿಕ ದೋಷದಿಂದ ಉಂಟಾದ ಅನಾನುಕೂಲತೆಗಾಗಿ ಬಿಎಂಆರ್‌ಸಿಎಲ್ ವಿಷಾದಿಸಿದೆ.ಒಂದೆಡೆ ಮೆಟ್ರೋ ಸಂಚಾರ ಸ್ಥಗಿತಗೊಂಡಿದ್ದರೆ, ಮತ್ತೊಂದೆಡೆ ಟ್ರಾಫಿಕ್ ಜಾಂ ಉಂಟಾಗಿತ್ತು. ನಾಲ್ಕನೇ ಶನಿವಾರವಾರದಂದು ಕೂಡ ಪೀಕ್ ಸಮಯದಲ್ಲಿ ಟ್ರಾಫಿಕ್‌ನಿಂದ ವಾಹನ ಸವಾರರು ಸಂಕಷ್ಟಕೀಡಾದರು. ಮೆಟ್ರೋ ರೈಲು ಕೈಕೊಟ್ಟ ಹಿನ್ನೆಲೆಯಲ್ಲಿ ಪ್ರಯಾಣಿಕರು ಕ್ಯಾಬ್ ಹಾಗೂ ಆಟೋ ಮೊರೆ ಹೋದರು. ಇದರಿಂದಾಗಿ ಎಂ.ಜಿ ರಸ್ತೆಯ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ಉಂಟಾಯಿತು.ಹಾಗೇ,ಇಂದಿನಿಂದ(ಶನಿವಾರ) ಪೀಣ್ಯದಿಂದ ನಾಗಸಂದ್ರ ವರೆಗಿನ ಮೂರು ದಿನ ನಮ್ಮ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ.ಇಂದಿನಿಂದ ಮೂರು ದಿನ ನಮ್ಮ ಮೆಟ್ರೋ ಸೇವೆ ತಾತ್ಕಲಿಕ ಸ್ಥಗಿತಗೊಳ್ಳಲಿದೆ. ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತದ ಬಗ್ಗೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ.ಜನವರಿ ೨೯ರ ಬೆಳಗ್ಗೆ ೫ ಗಂಟೆಯಿಂದ ಎಂದಿನಂತೆ ಸಂಚಾರ ಶುರುವಾಗಲಿದೆ. ಮೂರು ದಿನ ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲಿರುವುದರಿಂದ ಪೀಣ್ಯ ಸುತ್ತ ಮುತ್ತ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.