ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಸೌಲಭ್ಯ ಜಾರಿ

ಕಲಬುರಗಿ.ನ.19:ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ 2020-2021ನೇ ಸಾಲಿಗೆ ಶುಲ್ಕ ವಿನಾಯಿತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಶುಲ್ಕವಿನಾಯಿತಿ ಮೊತ್ತವು ಮಂಜೂರಾಗಿದ್ದು, ಅದರಲ್ಲಿ ಆಧಾರ ಎನ್‍ಪಿಸಿಐ ಸೀಡ್ (ಜೋಡಣೆ) ಆಗಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಶುಲ್ಕ ವಿನಾಯಿತಿ ಮೊತ್ತ ಜಮೆ ಮಾಡಲಾಗಿದೆ ಎಂದು ಇಲಾಖೆಯ ಅಧಿಕಾರಿ ರಮೇಶ್ ಜೆ. ಸಂಗಾ ಅವರು ತಿಳಿಸಿದ್ದಾರೆ.
ಆಧಾರ್ ಎನ್‍ಪಿಸಿಐ ಸೀಡ್ (ಜೋಡಣೆ) ಮಾಡಿಕೊಳ್ಳದ ಕೆಲವು ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮೊತ್ತವು ಮಂಜೂರಾಗಿದ್ದರೂ ಸಹ ವಿದ್ಯಾರ್ಥಿಗಳಿಗೆ ಜಮೆಯಾಗಿರುವುದಿಲ್ಲ, ಇಂತಹ ವಿದ್ಯಾರ್ಥಿಗಳು ಒಂದು ವಾರದೊಳಗಾಗಿ ಸಂಬಂಧಪಟ್ಟ ತಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕ್‍ಗಳನ್ನು ಮುದ್ದಾಂ ಸಂಪರ್ಕಿಸಿ ತಮ್ಮ ಬ್ಯಾಂಕ್ ಖಾತೆ ಸಂಖ್ಯೆಗೂ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಸಿ ಎನ್‍ಪಿಸಿಐ ಮ್ಯಾಪಿಂಗ್ ಮಾಡಿಸಲು ತಿಳಿಸಲಾಗಿದೆ, ಅದಕ್ಕೆ ತಪ್ಪಿದ್ದಲ್ಲಿ ತಮಗೆ ಮಂಜೂರಾಗಿರುವ 2020-21 ನೇ ಸಾಲಿನ ಶುಲ್ಕವಿನಾಯಿತಿ ಮೊತ್ತವು ಸ್ವಯಂಚಾಲಿತವಾಗಿ ತಿರಸ್ಕøತವಾಗಲಿದೆ ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ಕೆಲವು ವಿದ್ಯಾರ್ಥಿಗಳ ಆಧಾರ್ ಕಾರ್ಡನಲ್ಲಿ ಇರುವ ವಿದ್ಯಾರ್ಥಿಯ ಹೆಸರಿಗೂ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಯಲ್ಲಿನ ವಿದ್ಯಾರ್ಥಿಯ ಹೆಸರಿಗೂ ಹಾಗೂ 2020-2021ನೇ ಸಾಲಿಗೆ ಎಸ್‍ಎಸ್‍ಪಿಗೆ ಸಲ್ಲಿಸಿರುವ ಅರ್ಜಿಯಲ್ಲಿನ ವಿದ್ಯಾರ್ಥಿಯ ಹೆಸರಿಗೂ ತಾಳೆಯಾಗುತ್ತಿಲ್ಲ, ಇಂತಹ ಹೆಸರು ತಾಳೆಯಾಗದಂತಹ ಆಧಾರ್ ನೇಮ್ ನಾಟ್ ಮ್ಯಾಚ್) ಆಗಿರುವ ವಿದ್ಯಾರ್ಥಿಗಳು ಸಹ ಶುಲ್ಕ ವಿನಾಯಿತಿ ಮೊತ್ತವು ಮಂಜೂರಾಗಿದ್ದರೂ ಸಹ ವಿದ್ಯಾರ್ಥಿಗಳಿಗೆ ಜಮೆಯಾಗಿರುವುದಿಲ್ಲ, ಇಂತಹ ವಿದ್ಯಾರ್ಥಿಗಳು ಒಂದು ವಾರದೊಳಗಾಗಿ ಹತ್ತಿರದ ಆಧಾರದ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಹೆಸರನ್ನು ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಯಲ್ಲಿರುವಂತೆ ಯಥಾವತ್ತಾಗಿ ಆಧಾರ್ ಕಾರ್ಡ್‍ನಲ್ಲಿಯೂ ಸಹ ಹೆಸರನ್ನು ಇರುವಂತೆ ತಿದ್ದುಪಡೆ ಮಾಡಿಕೊಳ್ಳಲು ಅವರು ತಿಳಿಸಿದ್ದಾರೆ.
ಆಧಾರ್ ಸಂಖ್ಯೆ ತಿದ್ದುಪಡೆಯಾದ ನಂತರ ತಕ್ಷಣ ನಿಮ್ಮ ಕಾಲೇಜು ಇರುವ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಲಯಕ್ಕೆ ಮುದ್ದಾಂ ಹೋಗಿ ಅಫಡೇಟ್ ಮಾಡಿಸತಕ್ಕದ್ದು, ಅದಕ್ಕೆ ತಪ್ಪಿದ್ದಲ್ಲಿ ತಮಗೆ ಮಂಜೂರಾಗಿರುವ 2020-2021ನೇ ಸಾಲಿನ ಶುಲ್ಕವಿನಾಯಿತಿ ಮೊತ್ತವು ಸ್ವಯಂಚಾಲಿತವಾಗಿ ತಿರಸ್ಕøತವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಾಲಯಗಳನ್ನು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂರ್ಪಕಿಸಲು ಅವರು ಕೋರಿದ್ದಾರೆ.