ಮೆಟ್ರಿಕಿಯಲ್ಲಿ ವಿಕಾಸ್ ಭಾರತ್ ಸಂಕಲ್ಪ ಯಾತ್ರೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಡಿ,13- ಈ ವರೆಗೆ ಗಣಿನಾಡಿನ ಬಳ್ಳಾರಿ ತಾಲೂಕಿನಲ್ಲಿ ಸಂಚರಿಸುತ್ತಿದ್ದ ವಿಕಾಸ ಭಾರತ ಸಂಕಲ್ಪ ಯಾತ್ರೆ ನಿನ್ನೆ ಆಂದ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಸಂಡೂರು ತಾಲೂಕಿನ ಮೆಟ್ರಿಕೆ ಗ್ರಾಮದಲ್ಲಿ ಸಾಗಿತು. ಜನರಿಂದ ಉತ್ತಮ ಸ್ಪಂದನೆ ದೊರೆಯಿತು.
ಕಾರ್ಯ ಕ್ರಮದಲ್ಲಿ ದೇಶದ ಸಮಗ್ರತೆ ಮತ್ತು ಐಕ್ಯತೆ ಬಗ್ಗೆ ಸಂಕಲ್ಪದ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದ ಜನತೆ, ಕೃಷಿಯಲ್ಲಿ ಡ್ರೋಣ್ ಬಳಕೆ ಹೆರಗೆ ಎಂಬುದರ ಬಗ್ಗೆ ಅರಿತುಕೊಂಡರು.
ಮುದ್ರಾ ಮತ್ತಿತರ ಸಾಲ ಯೋಜನೆಯ ಪಲಾನುಭವಿಗಳಿಗೆ ಮಂಜೂರಾದ ಚೆಕ್ ಗಳನ್ನು ವಿತರಿಸಲಾಯ್ತು. ವಿವಿಧ ಯೋಜನೆಗಳ ಬಗ್ಗೆ ಭಾರತಿಯ ಸ್ಟೇಟ್ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕ ತಿಪ್ಪೇಸ್ವಾಮಿ ತಿಳಿಸಿದರು.
ಸ್ಥಳದಲ್ಲೇ ವಿವಿಧ ಯೋಜನೆಯ ಪಲಾನುಭವಿಗಳ ನೋಂದಣಿ ನಡೆಯಿತು.
ಸಂಜೆವಾಣಿಯೊಂದಿಗೆ ಮಾತನಾಡಿದ ಉಜ್ವಲ ಯೋಜನೆಯ ಲಾಭ ಪಡೆದ ವೃದ್ದೆ ಗಂಗಮ್ಮ ಮತ್ತು ಲೋಕಪ್ಪ, ಗೋವರ್ಧನ  ಯೋಜನೆಯಿಂದ ತಮಗೆ ಸಾಕಷ್ಟು ಸಹಕಾರಿಯಾಗಿದೆಂದರು.
ರೈತ ಸೋನಶೇಖರ್ ತಾವು ಫಸಲ್ ಭೀಮಾ ಯೋಜನೆ ಮಾಡಿಸಿತ್ತು ಇದರಿಂದ ನವಣೆ ಬೆಳೆ ನಷ್ಟವಾಗಿದ್ದಕ್ಕೆ ವಿಮೆಯಿಂದ ಬೆಲಕೆ ನಷ್ಟ ಪರಿಹಾರ ದೊರೆಯಿತೆಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸೋಮನಗೌಡ, ಗ್ರಾಮ ಪಂಚಾಯ್ತಿ  ಅಧ್ಯಕ್  ರುದ್ರಪ್ಪ, ಸದಸ್ಯರಾದ ಹನುಮಂತಪ್ಪ, ಮಲ್ಲಿಕಾರ್ಜುನ, ಮಂಜುನಾಥ,  ಸಂಯೋಜಕರಾದ ಶಶಿಧರ ಜಿ, ಕವಿತಾ ಮೊದಲಾದವರು ಇದ್ದರು.