ಮೆಟ್ಟು ಕತ್ತಿ ಮೇಲೆ ಕುಸಿದು ಬಿದ್ದು ಯುವಕ ಮೃತ್ಯು


ಕಾಸರಗೋಡು. ಜ.೮- ಅಡಿಕೆ ಸುಳಿಯುವ ಮೆಟ್ಟು ಕತ್ತಿ ಮೇಲೆ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಇಲ್ಲಿನ ಸಮೀಪದ ಕೊಡೋ ಬೇಳೂರು ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ಕೋಡೋ ಬೇಳೂರಿನ ಬಿಜು(೨೮) ಎಂದು ಗುರುತಿಸಲಾಗಿದೆ. ಮನೆಯಂಗಳದಲ್ಲಿ ಅಡಿಕೆ ಸುಳಿಯುತ್ತಿದ್ದಾಗ ಕುಸಿದು ಮೆಟ್ಟುಕತ್ತಿ ಮೇಲೆ ಅವರು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಹೊಟ್ಟೆಗೆ ಗಂಭೀರ ಗಾಯವಾಗಿದೆ. ತಕ್ಷಣ ಬಿಜುರವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.