ಮೆಘಾ ಲೋಕ ಅದಾಲತ್ : ಪ್ರಕರಣಗಳ ಇತ್ಯರ್ಥ

ಕಲಘಟಗಿ, ಮಾ 31: ಮೇಘಾ ಲೋಕ ಅದಾಲತ್ ಅನ್ನು ಕಲಘಟಗಿ ನ್ಯಾಯಾಲಯದ ಆವರಣದಲ್ಲಿ ದಿ. 27ರಂದು ಹಮ್ಮಿಕೊಳ್ಳಲಾಯಿತು.
ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀಮತಿ ದ್ರಾಕ್ಷಾಯಣಿ ಜಿ.ಕೆ. ಅವರು 3 ಚೆಕ್ ಬೌನ್ಸ್ ಪ್ರಕರಣಗಳನ್ನು, 5 ಮೋಟರ ವಾಹನ ಅಪಘಾತ ಪರಿಹಾರ ಪ್ರಕರಣಗಳು, 3 ಕೌಟುಂಬಿಕ ವ್ಯಾಜ್ಯಗಳನ್ನು, 13 ವಾಟ್ನಿ ದಾವೆಗಳನ್ನು, 2 ಅಮಲಜಾರಿಗಳನ್ನು ಹೀಗೆ ಒಟ್ಟು 25 ಪ್ರಕರಣಗಳನ್ನು ರಾಜೀ ಮಾಡಿ ರೂ. 11,50,000/- ಪರಿಹಾರದ ಮೊತ್ತವನ್ನು ಕೊಡಿಸಿದರು.
ಸಿವಿಲ್ ನ್ಯಾಯಾಧೀಶರಾದ ರಾಜಶೇಖರ ಎಮ್. ತಿಳಗಂಜಿ ಅವರು 4 ಚೆಕ್ ಬೌನ್ಸ್ ಪ್ರಕರಣಗಳನ್ನು, 14 ವಾಟ್ನಿ ದಾವೆಗಳನ್ನು ಮತ್ತು 1 ಜೀವನಾಂಶ ಪ್ರಕರಣ, 2 ಅಮಲಜಾರಿ ಪ್ರಕರಣ ಮತ್ತು 140 ಲಘು ಅಪರಾಧಗಳನ್ನು ಹೀಗೆ ಒಟ್ಟು 174 ಪ್ರಕರಣಗಳನ್ನು ರಾಜೀ ಮಾಡಿಸಿ ರೂ. 9,54,498/- ಪರಿಹಾರವನ್ನು ಕೊಡಿಸಿದರು.
ವಕೀಲ ಸಂಘದ ಅಧ್ಯಕ್ಷರಾದ ವಿ.ಬಿ. ಶಿವನಗೌಡ್ರ, ಆರ್. ವಾಯ್. ರೊಳ್ಳಿ ಮುಂತಾದವರು ಹಾಜರಿದ್ದರು. ವಿ.ಆರ್. ಗಾಣಿಗೇರ ಹಾಗೂ ಎಸ್.ವಿ. ಬೋಸ್ಲೆ ವಕೀಲರು ನ್ಯಾಯಿಕ ಸಂಧಾನಕಾರರಾಗಿದ್ದರು.
ಪ್ರಕರಣಗಳನ್ನು ರಾಜಿ ಮಾಡಿಸುವಲ್ಲಿ ಮಧ್ಯಸ್ಥಿಕೆಗಾರರಾದ ಎಸ್.ಟಿ. ತೆಗ್ಗಿಹಳ್ಳಿ, ಆರ್. ಎಸ್. ಉಡುಪಿ, ಎಸ್.ಜಿ. ಸುಂಕದ ರವರು ಸಕ್ರೀಯವಾಗಿ ಭಾಗವಹಿಸಿದ್ದರು.
ಅನೇಕ ಪ್ರಕರಣಗಳು ರಾಜೀ ಆದ ಮೇಲೆ ಪಕ್ಷಗಾರರು ಸಿಹಿ ಪದಾರ್ಥಗಳನ್ನು ಸಂತೋಷದಿಂದ ಹಂಚಿದರು.