ಮೆಗಾ ಲೋಕ ಅದಾಲತ್: ರಾಜಿ ಸಂಧಾನದ ಮೂಲಕ ಒಟ್ಟು 313 ಪ್ರಕರಣಗಳು ಇತ್ಯರ್ಥ

ಕಲಬುರಗಿ.ಮಾ.29:ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಶನಿವಾರದಂದು (ಮಾ. 27ರಂದು) ಮೆಗಾ ಲೋಕ ಆದಾಲತ್ ಏರ್ಪಡಿಸಲಾಗಿತ್ತು. ಈ ಮೆಗಾ ಲೋಕ ಅದಾಲತ್‍ನಲ್ಲಿ ಕಲಬುರಗಿಯ ಉಚ್ಚ ನ್ಯಾಯಾಲಯದ ಕಾನೂನು ಸೇವಾ ಸಮಿತಿಯಿಂದ ಮೋಟಾರು ವಾಹನ ವಿಮೆ ಪ್ರಕರಣ ಹಾಗೂ ಇತರೆ ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯಗಳ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಒಟ್ಟು 313 ಪ್ರಕರಣಗಳನ್ನು ಇತ್ಯರ್ಥಪಡಿಸಿ 7,17,89,100 ರೂ. ಗಳ ಪರಿಹಾರ ಮೊತ್ತವನ್ನು ಮಂಜೂರು ಮಾಡಲಾಗಿದೆ ಎಂದು ಕಲಬುರಗಿ ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿಗಳಾದ ಶ್ರೀನಿವಾಸ ಸುವರ್ಣ ಅವರು ತಿಳಿಸಿದ್ದಾರೆ.

    ಈ ಮೆಗಾ ಲೋಕ ಅದಾಲತ್‍ನಲ್ಲಿ ಮೋಟಾರು ವಾಹನದ ವಿಮೆ ಪ್ರಕರಣಗಳು ಮತ್ತು ಇತರ ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯಗಳ ಪ್ರಕರಣಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಕಲಬುರಗಿ ಪೀಠದಲ್ಲಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. 

   ಈ ಮೆಗಾ ಲೋಕ ಅದಾಲತ್‍ನಲ್ಲಿ ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಾಧೀಶಗಳಾದ ನ್ಯಾಯಮೂರ್ತಿ ಬಿ.ಎಮ್. ಶ್ಯಾಮಪ್ರಸಾದ್, ಎಂ. ನಾಗಪ್ರಸನ್ನ, ಶಿವಶಂಕರ ಅಮರಣ್ಣವರ, ವಿ. ಶ್ರೀಶಾನಂದ ಹಾಗೂ ಹಂಚಾಟೆ ಸಂಜೀವಕುಮಾರ ಅವರು ಭಾಗವಹಿಸಿದ್ದರು.