ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ನಗರ ಪೊಲೀಸ್ ಪೇದೆ ಆಯ್ಕೆ

ಬೆಂಗಳೂರು,ಮಾ.೨೪- ಉತ್ತರ ಅಮೆರಿಕದ ದಕ್ಷಿಣ ಭಾಗದಲ್ಲಿರುವ ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ನಗರ ಪೊಲೀಸ್ ಕಮೀಷನರೇಟ್ ನ ಪೊಲೀಸ್ ಪೇದೆಯೊಬ್ಬರು ಆಯ್ಕೆಯಾಗಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಪೇದೆ ಎಚ್ ಎಂ ಲೋಕೇಶ್ ಮೆಕ್ಸಿಕೋ ರಾಯಭಾರ ಕಚೇರಿಗೆ ಆಯ್ಕೆಯಾಗಿರುವುದು ಪೊಲೀಸ್ ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ.
ಸಂವಹನ, ಕಂಪ್ಯೂಟರ್ ಮತ್ತು ಇಂಗ್ಲಿಷ್‌ನಲ್ಲಿ ಕೌಶಲ್ಯ ಹೊಂದಿದ್ದ ಹೆಚ್ ಎಂ ಲೋಕೇಶ್,ಕೊರೊನಾ ಸಮಯದಲ್ಲಿ ನಾಗರಿಕರ ಜೊತೆ ನಿರಂತರ ಸಂಪರ್ಕ ಸಾಧಿಸಿ ಸಂದೇಹಗಳಿಗೆ ಉತ್ತರಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದರು.
ಇತ್ತೀಚೆಗೆ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಹುದ್ದೆಗೆ ಸಂದರ್ಶನ ಎದುರಿಸಿದ್ದ ಕಾನ್ಸ್‌ಟೇಬಲ್ ಲೋಕೇಶ್ ವಿವಿಧ ಹಂತಗಳಲ್ಲಿ ಸಂದರ್ಶನ ಎದುರಿಸಿ ಆಯ್ಕೆಯಾಗಿದ್ದಾರೆ. ಇದು ಇಡೀ . ಪ್ರವೀಣ್ ಸೂದ್, ಮೇಘರಿಕ್, ಸುನೀಲ್ ಕುಮಾರ್, ಭಾಸ್ಕರ್ ರಾವ್, ಕಮಲ್ ಪಂತ್ ಮತ್ತು ಪ್ರತಾಪ್ ರೆಡ್ಡಿ ಅವಧಿಯಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ನಿರ್ವಹಿಸಿದ್ದರು.ಲೋಕೇಶ್ ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಆಯ್ಕೆಯಾಗಿರುವ ಬಗ್ಗೆ ಪೊಲೀಸ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಟ್ವೀಟ್ ಮೂಲಕ ಅಭಿನಂಧಿಸಿದ್ದಾರೆ.