ಮೆಕ್ಕೇಜೋಳದ ಜೊತೆಗೆ ಅಕ್ಕಡಿ ಬೆಳೆ ಬೆಳೆಯಲು ಸಲಹೆ

ಜಗಳೂರು.ಜೂ.೩;  ಜಗಳೂರು ವಿಧಾನಸಭಾಕ್ಷೇತ್ರದಲ್ಲಿ ಮೊದಲು ರೈತರು ಎಳ್ಳನ್ನು ಅತಿ ಹೆಚ್ಚಾಗಿ ಬೆಳೆದು ಹೊರಗಡೆ ಕಳುಹಿಸುತ್ತಿದ್ದರು. ಅಕ್ಕಡಿಯಾಗಿ ತೊಗರಿ, ಅವರೆ ಸೇರಿದಂತೆ ಬೇರೆ ಬೆಳೆ ಬೆಳೆಯದೇ ಕೇವಲ ರೈತರು ಇಂದು ಒಂದೇ ಬೆಳೆ ಮೆಕ್ಕೇಜೋಳವನ್ನೇ ಅತಿಯಾಗಿ ಬೆಳೆಯುತ್ತಿದ್ದಾರೆ ಎಂದು ಶಾಸಕ ಎಸ್.ವಿ.ರಾಮಚಂದ್ರ ವಿಷಾಧ ವ್ಯಕ್ತ ಪಡಿಸಿದರು. ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ವತಿಯಿಂದ 2021-22 ನೇ ಸಾಲಿನಲ್ಲಿ ಪೂರ್ವಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಿಸಿ ಅವರು ಮಾತನಾಡಿದರು.ಬೀಜ, ರಸ ಗೊಬ್ಬರ ಕೊರತೆಯಾಗದಂತೆ 10ಕಡೆ ಕೇಂದ್ರಗಳಲ್ಲಿ ಸಂಗ್ರಹಣೆ ಮಾಡಲಾಗಿದ್ದು, ಸಬ್ಸಡಿ ಧರದಲ್ಲಿ ವಿತರಣೆ ಮಾಡಲು ನಮ್ಮ ಸರ್ಕಾರ ಎಲ್ಲಾ ಅಗತ್ಯ ಕ್ರಮಕೈಗೊಂಡಿದೆ. ಕಳಪೆ ಬಿಜಗಳು ಏನಾದರೂ ಕಂಡು ಬಂದಲ್ಲಿ ಅಂತ ಬೀಜ ಕಂಪನಿಗಳ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿಸಲಾಗುವುದೆಂದು ಬೀಜ ಕಂಪನಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು. ರೈತರು ಕೋರೊನಾ ಬಗ್ಗೆ ನಿರ್ಲಕ್ಷ ತಾಳದೇ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.ಜಂಟಿ ಕೃಷಿ ನಿರ್ಧೇಶಕರು ಶ್ರೀನಿವಾಸ್ ಚಿಂತಾಲ್ ಜಿಲ್ಲಾ ಮಾತನಾಡಿ ರೈತರು ಮೆಕ್ಕೇಜೋಳ ಸೇರಿದಂತೆ ಇತರೇ ಬೆಳೆಗಳ ಮದ್ಯೆ ಅಕ್ಕಡಿ ಬೆಳೆಗಳನ್ನು ಬೆಳೆಯುವಂತೆ ಸಲಹೆ ನೀಡಿದರು.ಡಿಸಿಸಿಬ್ಯಾಂಕ್ ಜಿಲ್ಲಾಧ್ಯಕ್ಷ ವೇಣುಗೋಪಾಲರೆಡ್ಡಿ ಮಾತನಾಡಿ ತಾಲ್ಲೂಕಿನ ರೈತರಿಗೆ ವಿವಿಧ ಬೆಳೆಗಳ ಮೇಲೆ ಕಡಿಮೆ ಬಡ್ಡಿ ದರದಲ್ಲಿ 60 ಕೋಟಿ ರೂ.ಸಾಲವನ್ನು ನೀಡಲಾಗಿದೆ. ನಮ್ಮ ತಾಲ್ಲೂಕಿನ ಬ್ಯಾಂಕಿಗೆ 1 ಕೋಟಿ ರೂ.ಲಾಭ ಬಂದಿದೆ ಎಂದರು.ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷರಾದ ರೇಣುಕಾನಂದ, ಉಪಾಧ್ಯಕ್ಷ ಗುರುಮೂರ್ತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಕೃಷಿ ಇಲಾಕೆಯ ಸಹಾಯಕ ನಿರ್ಧೇಶಕ ಶ್ರೀನಿವಾಸಲು, ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ.ಮಹೇಶ್, ಪ್ರಧಾನಕಾರ್ಯದರ್ಶಿ ನವೀನ್, ಹೆಚ್.ನಾಗರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.