ಮೆಕ್ಕೆಜೋಳ ಖರೀದಿ ಕೇಂದ್ರ ಶೀಘ್ರ ಪ್ರಾರಂಭಕ್ಕೆ ಒತ್ತಾಯ

 

ದಾವಣಗೆರೆ.ನ.೧೪; ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ ಮಾಡಲು ಸರ್ಕಾರ ತೀರ್ಮಾಸಿದ್ದು ಸ್ವಾಗತ, ಉಸ್ತುವಾರಿ ಸಚಿವರಾದ ಭೈರತಿ ಬಸವರಾಜು ಅವರು ಈ ಬಗ್ಗೆ ಮಾಹಿತಿ ನೀಡಿದ್ದು ಕೂಡಲೇ ಖರೀದಿ ಕೇಂದ್ರ ಆರಂಭ ಮಾಡಬೇಕೆಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು. ನವೆಂಬರ್ ತಿಂಗಳು ಕಳೆಯುತ್ತಾ ಬಂದಿದ್ದು ಈಗಾಗಲೇ ರೈತರು ಮೆಕ್ಕೇಜೋಳ ಮಾರಾಟಕ್ಕೆ ಸಿದ್ಧತೆ ಕೈಗೊಂಡಿದ್ದರು ಆದ್ರೆ ಖರೀದಿ ಕೇಂದ್ರ ಆರಂಭ ಮಾಡದ ಹಿನ್ನೆಲೆ ಈಗಾಗಲೇ ರೈತರು ಮೆಕ್ಕೇಜೋಳ ಮಾರಾಟ ಮಾಡಿದ್ದು ನಷ್ಟಕ್ಕೊಳಗಾಗಿದ್ದಾರೆ.

ಇನ್ನೂ ಉಳಿದ ರೈತರು ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದು ಇದೀಗ ಖರೀದಿ ಕೇಂದ್ರ ಆರಂಭವಾಗುವುದನ್ನ ಕಾಯುತ್ತಿದ್ದಾರೆ. ಕೂಡಲೇ ಸರ್ಕಾರ ಖರೀದಿ ಕೇಂದ್ರ ಆರಂಭ ಮಾಡಲು ಕ್ರಮ ಕೈಗೊಳ್ಳಬೇಕು ಅಲ್ಲದೇ, ಕ್ವಿಂಟಲ್ ಮೆಕ್ಕೇಜೋಳಕ್ಕೆ 2000 ದಿಂದ 2200 ರೂಪಾಯಿ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಈ ಬಾರಿ ಮುಂಗಾರು ಉತ್ತಮವಾಗಿ ಬಂದ ಹಿನ್ನೆಲೆ ಮೆಕ್ಕೇಜೋಳ ಬೆಳೆ ಕೂಡ ಉತ್ತಮವಾಗಿ ಬಂದಿತ್ತು ಸೆಪ್ಟೆಂಬರ್ ವೇಳೆಗೆ ಮೆಕ್ಕೇಜೋಳ ಖರೀದಿ ಕೇಂದ್ರ ಆರಂಭ ಮಾಡಿದ್ದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಸರ್ಕಾರ ಖರೀದಿ ಕೇಂದ್ರ ಆರಂಭಕ್ಕೆ ವಿಳಂಬ ಮಾಡಿರುವ ಕಾರಣ ಬಹುತೇಕ ಸಣ್ಣ ರೈತರುಮೆಕ್ಕೇಜೋಳ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ. ಸರ್ಕಾರ ಇನ್ನಾದರೂ ಖರೀದಿ ಕೇಂದ್ರವನ್ನ ಕೂಡಲೇ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಝು ವಿ ಶಿವಗಂಗಾ ಒತ್ತಾಯಿಸಿದರು.