
(sಸಂಜೆವಾಣಿ ವಾರ್ತೆ)
ಬ್ಯಾಡಗಿ: ತಾಲೂಕಿನಲ್ಲಿ ಮುಂಗಾರು ಮಳೆಯು ತಡವಾಗಿ ಬಂದಿದ್ದರಿಂದ ಈ ಭಾಗದ ಪ್ರಮುಖ ಬೆಳೆಯಾದ ಮೆಕ್ಕೆಜೋಳವನ್ನು ರೈತರು ತಡವಾಗಿ ಬಿತ್ತನೆ ಮಾಡಿದ್ದು, ಈ ನಡುವೆ ಸತತ ಎರಡು ವಾರಗಳ ಕಾಲ ಬಿಡುವಿಲ್ಲದೇ ಸುರಿದ ಮಳೆಯಿಂದ ಹಸಿಯು ಜಾಸ್ತಿಯಾಗಿ ಮೆಕ್ಕೆಜೋಳದ ಬೆಳೆಯಲ್ಲಿ ಶೀತಬಾಧೆಯು ಹೆಚ್ಚಾಗಿ ಬೆಳೆಯು ನೆರಳೆ/ಹಳದಿ ಬಣ್ಣಕ್ಕೆ ತಿರುಗಿವೆ. ಬೆಳೆಯು ಚೇತರಿಸಿಕೊಳ್ಳಲು ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರಗಳಾದ 13-0-45 ಮತ್ತು 19-19-19 ಇವುಗಳನ್ನು ಪ್ರತಿ ಲೀಟರ್ ನೀರಿಗೆ ಸಣ್ಣ ಬೆಳೆ ಇದ್ದಲ್ಲಿ 2 ಗ್ರಾಂ ಹಾಗೂ ದೊಡ್ಡ ಬೆಳೆ ಇದ್ದಲ್ಲಿ 5 ಗ್ರಾಂ ನಂತೆ ಇದರ ಜೊತೆಗೆ ಮೈಕ್ರೋನ್ಯೂಟ್ರಯೆಂಟ್ 12ರಿಂದ 15 ದಿನಗಳ ಅಂತರದಲ್ಲಿ ಸಿಂಪಡಿಸಿದರೆ ಅಧಿಕ ಇಳುವರಿ ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಜಿ.ಶಾಂತಮಣಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಮೆಕ್ಕೆಜೋಳದ ಬೆಳೆಯಲ್ಲಿ ಸೈನಿಕ ಹುಳು ಬಾಧೆ ನಿರ್ವಹಣೆಗೆ ಅರ್ಧ ಗ್ರಾಂ ಇಮಾಮೇಕ್ಟೀನ್ ಬೆಂಜೋಯೇಟ್ ಕೀಟನಾಶಕವನ್ನು ಪ್ರತಿ ಲೀಟರ್‍ಗೆ ಬೆರೆಸಿ ಸುಳಿಯಲ್ಲಿ ತುಂಬುವಂತೆ ಸಿಂಪಡಿಸುವುದಲ್ಲದೆ ಮೆಟಾರೈಜಿಯಂ ರಿಲೇ ಜೈವಿಕ ಪೀಡೆನಾಶಕವನ್ನು ಪ್ರತಿ ಲೀಟರ್ ನೀರಿಗೆ 3ಗ್ರಾಂ ಬೆರೆಸಿ ಸುಳಿಯಲ್ಲಿ ಬಿಡುವುದರಿಂದ 4ರಿಂದ 5 ದಿನಗಳಲ್ಲಿ ಸೈನಿಕ ಹುಳು ನಿಯಂತ್ರಣ ಆಗುವುದು. ಮೆಕ್ಕೆಜೋಳದಲ್ಲಿ ಮುಳ್ಳು ಸಜ್ಜೆಯನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಇಳುವರಿ ಬರುವುದಿಲ್ಲ. ಲಘು ಪೆÇೀಷಕಾಂಶಗಳನ್ನು ಯಾವುದೇ ಕಾರಣಕ್ಕೂ ಕಾಂಪ್ಲೇಕ್ಸ್ ಗೊಬ್ಬರಗಳ ಜೊತೆಗೆ ಬೆರೆಸಿ ಬೆಳೆಗೆ ನೀಡಬಾರದು.
ಅಗಷ್ಟ & ಸೆಪ್ಟಂಬರ್ ತಿಂಗಳಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದ್ದಾರೆ. ಆದುದರಿಂದ ರೈತರು ತಮ್ಮ ಜಮೀನಿನಲ್ಲಿ ಪರ್ಯಾಯ ನೀರಿನ ವ್ಯವಸ್ಥೆ, ಕೃಷಿಹೊಂಡ ತೆಗೆಯುವ ಮೂಲಕ ಮಾಡಿಕೊಳ್ಳುವುದು ಉತ್ತಮ. ಅಲ್ಲದೇ ಶಿಫಾರಸ್ಸಿನಂತೆ ರಸಗೊಬ್ಬರ ಬಳಸುವುದು ಸೂಕ್ತ. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಪೆÇೀಷಕಾಂಶಗಳನ್ನು ನೀಡಿದರೆ ಪೆÇೀಷಕಾಂಶಗಳ ಸಮತೋಲನ ತಪ್ಪಲಿದೆ. ಉದಾಹರಣೆಗೆ ರಂಜಕ ಅಂಶ ಹೆಚ್ಚಾದರೆ ಸತು ಮತ್ತು ಕಬ್ಬಿಣದ ಅಂಶಗಳ ಕೊರತೆ ಆಗುತ್ತದೆ. ಪೆÇೀಟ್ಯಾಷ್ ಗೊಬ್ಬರವನ್ನು ಮೂಲ ಮತ್ತು ಗೊಬ್ಬರವಾಗಿ ನೀಡಬೇಕು. ಪರಾಗ ಸ್ಪರ್ಶಕ್ಕೆ ಬೋರಾನ್ ಮತ್ತು ಪೆÇೀಟ್ಯಾಶ್ ಗೊಬ್ಬರಗಳ ಅವಶ್ಯಕತೆ ಇರುತ್ತದೆ. ಈ ಪೆÇೀಷಕಾಂಶಗಳ ಕೊರತೆಯಾದಲ್ಲಿ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗುತ್ತದೆ ಎಂದು ತಿಳಿಸಿದ್ದಾರೆ.
ವಿಮೆ:- ತಾಲೂಕಿನಲ್ಲಿ ಕೆಲವು ರೈತರು ಮೆಕ್ಕೆಜೋಳ ಬೆಳೆ ಕುಂಠಿತವಾಗಿದೆ ಎಂದು ಬೆಳೆಯನ್ನು ಅರಗುತ್ತಿರುವುದು ಕಂಡು ಬಂದಿದೆ. ಆದರೆ ಮೇಲೆ ತಿಳಿಸಿರುವಂತೆ ಸಿಂಪಡಿಸಿದರೆ ಬೆಳೆಯು ಉತ್ತಮವಾಗಿ ಬೆಳೆಯಲು ಸಾಧ್ಯತೆ ಇದೆ. ಬೆಳೆಯನ್ನು ಅರಗಿದಲ್ಲಿ ಬೆಳೆ ವಿಮೆ ತುಂಬಿರುವ ರೈತರು ಬೆಳೆ ಸಮೀಕ್ಷೆಯಲ್ಲಿ ಜಿಪಿಎಸ್ ಪೆÇೀಟೊ ತೆಗೆಯುವ ಮುನ್ನವೇ ಬೆಳೆವಿಮೆಯ ಬೆಳೆಯು ಹೊಂದಾಣಿಕೆಯಾಗದೇ ಬೆಳೆವಿಮೆಯು ಘೊಷಣೆಯಾದಾಗ ಬೆಳೆವಿಮೆಯ ಪರಿಹಾರ ಧನ ಬರುವುದಿಲ್ಲ. ಆದುದರಿಂದ ಬೆಳೆಯನ್ನು ನಿರ್ವಹಣೆ ಮಾಡಿಕೊಂಡು ಉಳಿಸಿಕೊಳ್ಳಿ ಎಂದರಲ್ಲದೇ, ಜಮೀನಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಈಗಾಗಲೇ ಬ್ಯಾಡಗಿ ತಾಲ್ಲೂಕಿನಲ್ಲಿ 26779 ಹೇಕ್ಟೇರ್ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಸದ್ಯ ಮಳೆಯು ನಿಂತಿರುವುದರಿಂದ ಎಡೆಕುಂಟಿ ಮತ್ತು ದಿಂಡು ಏರಿಸಬೇಕು. ಈ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸಬಾರದು ಎಕರೆ ಕೇವಲ 15ಕೆಜಿಯಷ್ಟು ಬಳಸಬೇಕು ಎಂದು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.