ಮೆಕಾಯ್-ಕಿಂಗ್ ಅಬ್ಬರ ಭಾರತ ವಿರುದ್ಧ ವಿಂಡೀಸ್‌ಗೆ ಜಯ

ಟ್ರಿನಿಡಾಡ್,ಆ. ೨- ಎರಡನೇ ಟಿ-೨೦ ಪಂದ್ಯದಲ್ಲಿ ಭಾರತದ ವಿರುದ್ಧ ವೆಸ್ಟ್‌ಇಂಡೀಸ್ ೫ ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ೫ ಪಂದ್ಯಗಳ ಸರಣಿ ೧-೧ ರಿಂದ ಸಮಬಲವಾಗಿದೆ.
ಭಾರತ ಕೆರೇಬಿಯನ್ ನಾಡಿಗೆ ಪ್ರವಾಸ ಕೈಗೊಂಡ ಬಳಿಕ ವೆಸ್ಟ್‌ಇಂಡೀಸ್ ದಾಖಲಿಸಿರುವ ಮೊದಲ ಗೆಲುವು ಇದಾಗಿದೆ. ೧೩೮ ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ವಿಂಡೀಸ್, ಒಬೆಟ್‌ಮೆಕಾಯ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ೧೯.೨ ಓವರ್‌ಗಳಲ್ಲಿ ೫ ವಿಕೆಟ್ ಕಳೆದುಕೊಂಡು ವಿಂಡೀಸ್ ಗೆಲುವಿನ ನಗೆ ಬೀರಿತು.
ಆರಂಭಿಕ ಆಟಗಾರಿ ಬ್ರೆಂಡನ್‌ಕಿಂಗ್ ೨ ಸಿಕ್ಸರ್, ೮ ಬೌಂಡರಿ ಬಾರಿಸಿ ೬೮ ರನ್ ಗಳಿಸಿದರು. ಏಕದಿನ ಪಂದ್ಯದಲ್ಲಿ ವಿಫಲರಾಗಿದ್ದ ಬ್ರೆಂಡನ್, ಟಿ-೨೦ಯ ೨ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಗೆಲುವಿಗೆ ಪ್ರಮುಖಪಾತ್ರ ವಹಿಸಿದರು, ದೇವೂಸ್ ಥಾಮ್ಸನ್ ೩೧ ರನ್ ಗಳಿಸಿದರು. ಉಳಿದಂತೆ ನಿಕೊಲಸ್ ಪೋರನ್ ೧೪, ಖಲ್ ಮೇಯರ್‍ಸ್ ೬ ರನ್ ಗಳಿಸಿ ಔಟಾದರು. ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ, ವಿಂಡೀಸ್‌ನ ಮೆಕಾಯ್ ಬೌಲಿಂಗ್ ದಾಳಿಗೆ ತತ್ತರಿಸಿತು.
ಭಾರತದ ಪರ ಯಾವೊಬ್ಬ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲ ವಿಫಲರಾದರು. ಹಾರ್ದಿಕ್‌ಪಾಂಡ್ಯ ೩೧, ರವೀಂದ್ರ ಜಡೇಜಾ ೨೭, ರಿಷಬ್‌ಪಂತ್ ೨೪ ರನ್ ಗಳಿಸಿದರು. ವಿಂಡೀಸ್ ಪರ ಮೆಕಾಯ್ ೪ ಓವರ್‌ನಲ್ಲಿ ೧೭ ರನ್ ನೀಡಿ ೬ ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್
ಭಾರತ ೧೯.೩ ಓವರ್‌ಗಳಲ್ಲಿ ೧೩೮ಕ್ಕೆ ಆಲೌಟ್.
ವೆಸ್ಟ್‌ಇಂಡೀಸ್ ೧೯.೨ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೪೧.