ಮೃತ 700 ಮಂದಿ ರೈತರ ಕುಟುಂಬಗಳಿಗೆ ಪರಿಹಾರಕ್ಕೆ ರಾಹುಲ್ ಆಗ್ರಹ

Tamil Nadu, Jan 23 (ANI): Congress leader Rahul Gandhi interacts with representatives of MSME at Suguna Auditorium, Nehru Nagar, in Kalapatti, on Saturday. (ANI Photo)

ನವದೆಹಲಿ, ಡಿ.7- ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ವೇಳೆ ಮೃತ ರೈತ ಕುಟುಂಗಳಿಗೆ ಪರಿಹಾರ ಮತ್ತು ಉದ್ಯೋಗ ಕಲ್ಪಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಲೋಕಸಭೆಯ ಶೂನ್ಯ ವೇಳೆಯಲ್ಲಿ ಇಂದು ಈ ವಿಷಯ ಪ್ರಸ್ತಾಪಿಸಿದರು. ಮೈತ ರೈತರ ವಿವರಗಳನ್ನು ಸಂಗ್ರಹಿಸುವಲ್ಲಿ ವಿಫಲವಾಗಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಪಂಜಾಬ್ ಮತ್ತು ಹರಿಯಾಣ ರೈತರ ಕುಟುಂಬಗಳಿಗೆ ಪರಿಹಾರ ಮತ್ತು ಉದ್ಯೋಗ ಕಲ್ಪಿಸಿರುವ ಪಟ್ಟಿಯ ವಿವರ ನೀಡಿದರು.
ಈ ಕುರಿತು ಕೇಂದ್ರ ಸರ್ಕಾರ ಹೇಳಿಕೆ ನೀಡುವಂತೆ ಒತ್ತಾಯಿಸಿ ಎನ್ ಸಿಪಿ, ಡಿಎಂಕೆ ಸಂಸದರೊಂದಿಗೆ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸದನದಿಂದ ಹೊರನಡೆದರು.
ರೈತರು ನಡೆಸಿದ ಪ್ರತಿಭಟನೆ ವೇಳೆ 700 ಮಂದಿ ರೈತರು ಸಾವನ್ನಪ್ಪಿದ್ದಾರೆ. ಕೃಷಿ ಕಾಯ್ದೆ ವಾಪಸ್ ಪಡೆಯುವ ವೇಳೆ ಮೋದಿಯವರು ಈಗಾಗಲೇ ರೈತರ ಕ್ಷಮೆ ಕೋರಿದ್ದಾರೆ. ಎಷ್ಟು ಮಂದಿ ರೈತರು ಮೃತಪಟ್ಟಿದ್ದರು ಎಂದು ಕೃಷಿ ಸಚಿವರನ್ನು ಕೇಳಲಾಗಿತ್ತು.‌ ತಮ್ಮ ಬಳಿ ಮಾಹಿತಿ ಇಲ್ಲವೆಂದು ಹೇಳಿದ್ದಾಗಿ ಕಾಂಗ್ರೆಸ್ ದೂರಿದೆ.
ಪಂಜಾಬ್ ಸರ್ಕಾರವ 400ಕ್ಕೂ ಅಧಿಕ ರೈತರಿಗೆ ತಲಾ ಐದು ಲಕ್ಷ ಪರಿಹಾರ ನೀಡಿರುವ ಮಾಹಿತಿಯು ನಮಗೆ ಲಭ್ಯವಾಗಿದೆ. ಈ ಪೈಕಿ 152 ಜನರಿಗೆ ಉದ್ಯೋಗ ನೀಡಲಾಗಿದೆ. ಹರಿಯಾಣದಲ್ಲಿಯೂ 70ಕ್ಕೂ ಅಧಿಕ ರೈತರಿಗೆ ಪರಿಹಾರ ನೀಡಿರುವ ಪಟ್ಟಿ ತಮ್ಮ ಬಳಿಯಿದೆ ಎಂದು ರಾಹುಲ್ ಗಾಂಧಿ ಹೇಳಿದರು.