ಮೃತ ಶಾಲಾ ಬಾಲಕಿ ಮನೆಗೆ ಭೇಟಿ – ಕುಟುಂಬಕ್ಕೆ ಶಾಸಕ ಡಾ ಶ್ರೀನಿವಾಸ ಸಾಂತ್ವನ

(ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 10 :- ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಅಮರದೇವರಗುಡ್ಡ ಗೊಲ್ಲರಹಟ್ಟಿಯಲ್ಲಿ ಜು 4ರಂದು ಶಾಲೆಗೆ ಹೊರಟಿದ್ದ 3ನೇ ತರಗತಿ ಸೃಷ್ಠಿಗೆ ಲಘು ವಾಹನ ಡಿಕ್ಕಿಯಿಂದ ಮೃತಪಟ್ಟಿದ್ದು ಆ ಸಂದರ್ಭದಲ್ಲಿ  ವಿಧಾನಸಭೆ ಮೊದಲ ಅಧಿವೇಶನದಲ್ಲಿ ಭಾಗಿಯಾಗಿದ್ದ  ಕ್ಷೇತ್ರದ  ಶಾಸಕ ಡಾ ಶ್ರೀನಿವಾಸ  ಶನಿವಾರ ಮೃತ ಬಾಲಕಿ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದರು.
ಬಾಲಕಿ ಸೃಷ್ಠಿ ಸಾವು ದುರದೃಷ್ಟಕರವಾಗಿದ್ದು ಈ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಿದ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ರಾಜ್ಯದ ಶಾಲೆಯ ಮುಂದಿನ ರಸ್ತೆಗಳು ಸುರಕ್ಷತೆ ಕಾಪಾಡಲು ಹಮ್ಸ್ ಗಳನ್ನು ಹಾಕಬೇಕು, ಶಾಲೆಯ ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಕಲ್ಪಿಸಬೇಕೆಂದು ಎಂದು ಮೊದಲ ಅಧಿವೇಶನದಲ್ಲೇ ಧ್ವನಿ ಎತ್ತಿ ಪ್ರಸ್ತಾಪ ಮಾಡಿ ಸಂತಾಪ ಸೂಚಿಸಿದ್ದರು. ಶನಿವಾರ ಕ್ಷೇತ್ರಕ್ಕೆ ಆಗಮಿಸಿದ ಶಾಸಕ ಮೃತ ಸೃಷ್ಠಿ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿ ಸರ್ಕಾರದಿಂದ ಸಿಗುವ ಪರಿಹಾರಧನವನ್ನು ಆದಷ್ಟು ಬೇಗನೆ ನೀಡುವ ಭರವಸೆ ನೀಡಿದರು. ಅಲ್ಲದೆ ಉಳಿದ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಕುಟುಂಬದವರಿಗೆ ಕಿವಿ ಮಾತು ಹೇಳಿದ ಶಾಸಕರು ಚಿಕ್ಕ ಮನೆಯನ್ನು ಮುಂದೆ ಯಾವುದಾದರು ವಸತಿ ಯೋಜನೆ  ಅನುದಾನದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಶಾಸಕರು ತಿಳಿಸಿದರು.
ಶಾಸಕರಲ್ಲಿ ಮನವಿ ಮಾಡಿದ ಮೃತಳ ತಂದೆ : ಮೃತ ಸೃಷ್ಠಿ ಸೇರಿದಂತೆ ನನಗೆ ನಾಲ್ಕು ಹೆಣ್ಣು ಮಕ್ಕಳಿದ್ದರು ಆದರೆ ದುರ್ದೈವ ಎಂಬಂತೆ ಮಗಳು ಅಪಘಾತದ ಸಾವು ಕಂಡಿದ್ದು ಉಳಿದ ಮೂವರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಅನುಕೂಲ ಮಾಡಿಕೊಡುವಂತೆ ಶಾಸಕರಿಗೆ ಸೃಷ್ಠಿ ತಂದೆ ಶ್ರೀನಿವಾಸ ಮನವಿ ಮಾಡಿದರು ಅದಕ್ಕೆ ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ ಶ್ರೀನಿವಾಸ ಸ್ಪಂದನೆ ನೀಡಿದ್ದಾರೆ ಎಂದು ತಿಳಿದಿದೆ.
ಈ ಸಂದರ್ಭದಲ್ಲಿ ಮೃತ ಸೃಷ್ಟಿಯ ತಂದೆ ಶ್ರೀನಿವಾಸ ಹಾಗೂ ಶಾಸಕರ ಸಹೋದರ ಎನ್ ಟಿ ತಮ್ಮಣ್ಣ ಇತರರಿದ್ದರು.

One attachment • Scanned by Gmail