ಮೃತ ರೈತನ ಕುಟುಂಬಸ್ಥರಿಗೆ ಶಾಸಕ ಲಕ್ಷ್ಮಣ ಸವದಿ ಸಾಂತ್ವನ

ಅಥಣಿ : ಸೆ.19:ಸಾಲ ಬಾಧೆ ತಾಳಲಾರದೆ ರವಿವಾರ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲೂಕಿನ ಹಲ್ಯಾಳ ಗ್ರಾಮದ ಮೃತ ರೈತ ಸಿದ್ದಲಿಂಗ ಮುರಗೆಪ್ಪಾ ಕೊಳೆಕರ ಅವರ ಮನೆಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿಯವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ಹೇಳಿದರು.
ನಾನು ನಿಮ್ಮ ದುಃಖದಲ್ಲಿ ಭಾಗಿಯಾಗಿದ್ದೇನೆ ಹಾಗೂ ಮೃತ ರೈತನ ಕುಟುಂಬಸ್ಥರಿಗೆ ಶೀಘ್ರದಲ್ಲಿಯೇ ಸರ್ಕಾರದಿಂದ ಸಿಗುವ ಪರಿಹಾರಧನ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುದಕಣ್ಣ ಶೇಗುಣಸಿ, ಮಹಾದೇವ ಬಿಸಲನಾಯಿಕ, ಕಾಂತು ಕಾಗವಾಡ, ರಮೇಶ ಗುಮಟಿ, ಸಿದ್ದಪ್ಪ ಲೋಕುರ, ದೀಪಕ ಮುರಗುಂಡಿ, ಪಪ್ಪಣ್ಣ ಸನದಿ, ಸಿದ್ದಪ್ಪ ಪಾಟೀಲ, ಮಧು ವಾಲಿಕಾರ್, ರಾಯಪ್ಪ ಬಾಗಿ, ಕುಮಾರ್ ಲೋಕುರ. ಸೇರಿದಂತೆ ಇತರರು ಇದ್ದರು.