ಮೃತ ಯೋಧ ಕುಟುಂಬಕ್ಕೆ ೧ ಲಕ್ಷ ಹಣ ನೀಡಿದ ಡಾ.ಸಿ.ಜಯರಾಜ್

ಹೊಸಕೋಟೆ,ಮೇ.೭- ವಹ್ನಿಕುಲ ತಿಗಳ ಸಂಘದ ರಾಜ್ಯಾದ್ಯಾಕ್ಷರು ಹಾಗು ಹೊಸಕೋಟೆ ಟೌನ್ ಬಿಜೆಪಿ ಘಟಕದ ಅಧ್ಯಕ್ಷರಾದ ಡಾ.ಸಿ.ಜಯರಾಜುರವರ ಹುಟ್ಟು ಹಬ್ಬದ ಅಂಗವಾಗಿ ನಮ್ಮ ದೇಶದ ಏಳಿಗೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ವೀರ ಯೋಧ ದಿವಂಗತ ಅಮೀರ್ ಮಿಯಾರವರ ಕುಟುಂಬಕ್ಕೆ ಒಂದು ಲಕ್ಷ ರೂಗಳ ಹಣವನ್ನು ನೀಡಿ ಮಾನವೀಯತೆ ತೋರಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ವೀರ ಯೋದ ದಿವಂಗತ ಅಮೀರ್ ಮಿಯಾ ರವರ ಕುಟುಂಬಕ್ಕೆ ಒಂದು ಲಕ್ಷ ರೂಗಳ ಹಣವನ್ನು ನೀಡಿ ಮಾತನಾಡಿದ ಡಾ.ಸಿ.ಜಯರಾಜು. ರವರು, ತಮ್ಮ ಹುಟ್ಟು ಹಬ್ಬವನ್ನು ಯಾವ ವರ್ಷವೂ ಆಚರಿಸಿಕೊಂಡಿಲ್ಲ ಬದಲಾಗಿ ಪ್ರತಿ ವರ್ಷ ನಮ್ಮ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ವೀರ ಯೋದರ ಕುಟುಂಬದವರಿಗೆ ಒಂದು ಸಣ್ಣ ಅಳಿಲು ಸೇವೆಯಾಗಿ ಒಂದು ಲಕ್ಷ ಹಣವನ್ನು ನೀಡಿ ಅವರಿಂದ ಆಶೀರ್ವಾದ ಪಡೆದು ಅದರಲ್ಲೇ ತಮ್ಮ ಹುಟ್ಟು ಹಬ್ಬವನ್ನು ಕಾಣುತ್ತೇನೆ.
ಆದರೆ ಈ ಬಾರಿ ಚಿಂತಾಮಣಿ ನಗರದ ಕುಂಬಾರಪೇಟೆ ನಿವಾಸಿಗಳಾದ ಅಮೀರ್ ಮಿಯಾ ರವರ ಬಗ್ಗೆ ವಿಚಾರಿಸಿದಾಘ ಅವರು ೧೯೫೮ ರಲ್ಲಿ ಸೇನೆಗೆ ಸೇರಿ ೧೯೭೧ ರಲ್ಲಿ ಭಾರತ ಪಾಕಿಸ್ಥಾನದ ವಾರ್‌ನಲ್ಲಿ ಹೋರಾಡುವಾಗ ನಮ್ಮ ಪ್ರಾಣ ಕಳೆದುಕೊಂಡಿದ್ದರು.
ಆದ್ದರಿಂದ ಅವರ ಪತ್ನಿ ಹಾಗು ಅವರ ಕುಟುಂಬಕ್ಕೆ ಒಂದು ಲಕ್ಷ ಹಣವನ್ನು ನೀಡಿ ಅವರ ಕುಟುಂಬವನ್ನು ಅಭಿನಂದಿಸಿದ್ದೇನೆ ಎಂದರು.