ಮೃತ ಯುವ ರೈತನ ಮನೆಗೆ ಪ್ರಿಯಾಂಕ್ ಭೇಟಿ

?????????

ವಾಡಿ:ಜ. 19: ಪಟ್ಟಣ ಸಮೀಪದ ಕಮರವಾಡಿ ಗ್ರಾಮದಲ್ಲಿ ಇತ್ತೀಚೆಗೆ ಸಾಲಬಾಧೆಯಿಂದ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವ ರೈತ್‍ನ ಮನೆಗೆ ಮಾಜಿ, ಸಚಿವ ಹಾಲಿ ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಜ.6ರಂದು ಸಾಲಭಾದೆಯಿಂದ ಮೃತಪಟ್ಟ ನಾಗಪ್ಪ ತಳವಾರ (25), ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಭೇಟಿ ನೀಡಿದರು.

ಶಾಸಕರ ಎದುರು ಅಳಲು ತೋಡಿಕೊಂಡ ಮೃತ ಯುವಕನ ತಾಯಿ ಜಗದೇವಿ ತಳವಾರ, ನನ್ನ ಮಗ ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಗಾರು ಹಾಗೂ ಹಿಂಗಾರೂ ಬೆಳೆಗಳು ಕೈಗೆ ಸಿಗದೆ ನಷ್ಟವಾಗಿದೆ. ಇದರಿಂದ ಮಗ ಮನನೊಂದು ಸಾವಿಗೆ ಶರಣಾಗಿದ್ದಾನೆ. ನನ್ನ ಮಗನ ಸಾವಿನಿಂದ ನಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ದುಡಿಯುವ ಮಗನನ್ನು ಕಳೆದುಕೊಂಡು ನಮ್ಮ ಸಂಸಾರ ಬೀದಿಗೆ ಬಿದ್ದಿದೇ ಎಂದು ಅಳಲು ತೊಡಿಕೊಂಡಳು.

ಈ ವೇಳೆ ತಾಯಿಯನ್ನು ಸಂತೈಸಿದ ಶಾಸಕ ಪ್ರಿಯಾಂಕ್ ಖರ್ಗೆ ಹೆದರಬೇಡಿ ತಾಳ್ಮೆಯಿಂದ ಇರಿ ನಿಮ್ಮ ಜೊತೆಯಲ್ಲಿ ನಾನು ಇದ್ದೇನೆ. ಸರಕಾರದಿಂದ ಸಿಗುವ ಸೌಲಭ್ಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಪರಿಹಾರ ಕಲ್ಪಿಸಿಕೊಡುತ್ತೇನೆ ಎಂದರು.

ಖಾಸಗಿ ಹಾಗೂ ಬ್ಯಾಂಕುಗಳಲ್ಲಿ ದುಬಾರಿ ಬಡ್ಡಿಗೆ ಹಣ ತೆಗೆದುಕೊಂಡಿದ್ದ ಮೃತ ಯುವಕ ನಾಗಪ್ಪ ತಳವಾರ, ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದರು. ಈ ಸಂದರ್ಭದಲ್ಲಿವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ ಸಾಹೇಬ್, ಚಿತ್ತಾಪುರ ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ, ಕಮರವಾಡಿ ಗ್ರಾಪಂ ಪಿಡಿಒ ಹಣಮಂತರಾಯ ಹೊಸಮನಿ, ಕಾರ್ಯದರ್ಶಿ ಬಸವರಾಜ ಗಂಜಿ, ಮುಖಂಡರಾದ ರಮೇಶ ಮರಗೋಳ, ಸಂಜಯ ಬುಳ್ಕರ್, ಸೂರ್ಯಕಾಂತ ರದ್ದೇವಾಡಿ, ಅಣ್ಣಪ್ಪಗೌಡ ಪೊಲೀಸ್ ಪಾಟೀಲ, ಶಿವಶರಣಪ್ಪ ಯರಗಲ್, ಬಸವರಾಜಗೌಡ ದೇಶಮುಖ, ಗಣೇಶ ಗುತ್ತೇದಾರ, ಸಿದ್ಧಪ್ಪ ಕೊಟಗಾರ ಸೂಲಹಳ್ಳಿ, ಮಾಲಿಕಯ್ಯ ಗುತ್ತೇದಾರ, ಸಿದ್ದಪ್ಪ ತಳವಾರ, ಮರೆಪ್ಪ ಮಾಂಗ, ಲಕ್ಷ್ಮಣ ಅಮಕಾರ, ಹರೀ ಚವ್ಹಾಣ, ಹೀರಾ ಮೋಳಿತಾಂಡಾ ಸೇರಿದಂತೆ ಅನೇಕರು ಇದ್ದರು.