ಮೃತ ಯುವಕನ ಕುಟುಂಬಸ್ಥರಿಗೆ ಸಾಂತ್ವನ

ಚನ್ನಮ್ಮನ ಕಿತ್ತೂರ,ಮಾ28: ತಾಲೂಕಿನ ದೇವಗಾಂವ ಗ್ರಾಮದ ಶಿರಗಾಪೂರ ಓಣಿಯಲ್ಲಿ ಜರುಗುವ ಸುಪ್ರಸಿದ್ದ ಶಿರಗಾಪೂರ ಕಾಮಣ್ಣನ ಜಾತ್ರೆಗೆ ಖಾನಾಪೂರ ತಾಲೂಕಿನ ಭೂರಣಕಿ ಗುಡ್ಡದಿಂದ ಗಣಿ(ಮರ)ವನ್ನು ಹಳಬಂಡಿಯಲ್ಲಿ ತೆಗೆದುಕೊಂಡು ಬರುವ ಸಂದರ್ಭದಲ್ಲಿ ಚಕ್ಕಡಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟ ಯುವಕ ಬಸವರಾಜ (25) ತಂದೆ ದೇವಪ್ಪ ಶೀಗಿಹಳ್ಳಿ ಇವರ ಮನೆಗೆ ಕಾಂಗ್ರೇಸ್ ಮುಖಂಡೆ ಹಾಗೂ ಉದ್ಯಮಿ ಲಕ್ಷ್ಮೀ ಇನಾಮದಾರ ಭೇಟಿ ನೀಡಿ ಅವರ ತಾಯಿ ಸೇರಿದಂತೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಶಿವು ಸಾವಣ್ಣನವರ, ಫಕ್ಕೀರಪ್ಪ ಜಾಗಂಟಿ, ನವೀನ ರಾಮಜೀ, ಮಂಜು ಹಲಸಗಿ, ಗೋಪಾಲ ಹೊಸಮನಿ, ತಮ್ಮಣ್ಣಾ ಮುಪ್ಪಿನಮಠ, ಲಿಂಗರಾಜ ಚಿಕ್ಕಣ್ಣನವರ, ಬಾಲಚಂದ್ರ ಸಾವಳಗಿಮಠ, ಈರಣ್ಣಾ ವಣ್ಣೂರ , ಸಂಗಮೇಶ ಮತ್ತು ಉಡಕೇರಿ ಸೇರಿದಂತೆ ಸಾರ್ವಜನಿಕರಿದ್ದರು.