ಮೃತ ಬಾಲಕಿಗೆ ಕ್ಯಾಂಡ್‍ಲ ಮಾರ್ಚ ಮೂಲಕ ಭಾವಪೂರ್ಣ ಶೃದ್ಧಾಂಜಲಿ

ಆಳಂದ:ನ.4: ಎರಡು ದಿನಗಳ ಹಿಂದೆ ಸ್ಥಳೀಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಘಟನೆ ಖಂಡಿಸಿ ಪಟ್ಟಣದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಕೊರಳ್ಳಿ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ನಾಗರಿಕರು ಸೇರಿ ಗುರುವಾರ ಸಂಜೆ ಕ್ಯಾಂಡಲ ಮಾರ್ಚ ನಡೆಸಿ ಮೃತ ಬಾಲಕಿಯ ಆತ್ಮಕ್ಕೆ ಶಾಂತಿಕೋರಿ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಿದರು.

ಪಟ್ಟಣದ ಬಸ್ ನಿಲ್ದಾಣದಿಂದ ಶ್ರೀರಾಮ ಮಾರುಕಟ್ಟೆ, ಪುರಸಭೆ, ರಜ್ವಿರೋಡ ಮಾರ್ಗವಾಗಿ ಬಸ್ ನಿಲ್ದಾಣವರೆಗೆ ನಡೆದ ಕ್ಯಾಂಡಲ್ ಮಾರ್ಚನಲ್ಲಿ ಪ್ರತಿಯೊಬ್ಬರು ದೀಪವನ್ನು ಹಿಡಿದ ಮೌನವಾಗಿ ಹೆಜ್ಜೆಹಾಕುತ್ತಾ ಬಂದು ಬಸ್ ನಿಲ್ದಾಣದ ಮುಂದೆ ಭಾವಪೂರ್ಣ ಶೃದ್ಧಾಂಜಲಿ ಅರ್ಪಪಿಸಿ ಒಂದು ನಿಮಿಷ್ಯ ಮೌನಾಚರಣೆ ಕೈಗೊಂಡರು.

ಈ ಸಂದರ್ಭದಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ನಾಗರಾಜ ಘೋಡಕೆ, ಉಪಾಧ್ಯಕ್ಷ ಸುನೀಲ ಐರೊಡಗಿ, ಸಂಘಟನೆ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಸೀಫ್ ರುದ್ರವಾಡಿ, ಸಿದ್ಧರೂಢ ಸರಸಂಬಿ, ಬಸವರಾಜ ಕೆರೂರ, ನಾಗರಾಜ ಆರ್ಯ, ಬಸವರಾಜ ಘಂಟೆ, ಉಮೇಶ ಸುತಾರ, ರಾಜಕುಮಾರ ಇಕ್ಕಳಕಿ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.