ಮೃತ ಪ್ರೀತಿ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡುವಂತೆ ಒತ್ತಾಯ

ರಾಯಚೂರು,ಮಾ.೦೩- ತೆಲಂಗಾಣ ವೈದ್ಯಕೀಯ ದಲಿತ ವಿದ್ಯಾರ್ಥಿ ರ್‍ಯಾಗಿಂಗ್‌ನಿಂದ ಬೇಸತ್ತು ಮೃತಪಟ್ಟ ಪ್ರೀತಿ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಸರ್ಕಾರಿ ನೌಕರಿ ನೀಡುವಂತೆ ಪತ್ರಿಕಾ ಹೇಳಿಕೆ ಮೂಲಕ ತೆಲಂಗಾಣ ಸರಕಾರಕ್ಕೆ ಸಾಮಾಜಿಕ ಕಾರ್ಯಕರ್ತ ಆನಂದ ಏಗನೂರು ಅವರು ಒತ್ತಾಯಿಸಿದರು.
ತೆಲಂಗಾಣದ ವಾರಂಗಲ್‌ನಲ್ಲಿ ರ್‍ಯಾಗಿಂಗ್‌ನಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಸ್ನಾತಕೋತ್ತರ ವೈದ್ಯಕೀಯ ದಲಿತ ವಿದ್ಯಾರ್ಥಿನಿ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಮೃತ ಕುಟುಂಬಕ್ಕೆ ಸರಕಾರಿ ಉದ್ಯೋಗ ನೀಡಬೇಕು ಎಂದು ಆನಂದ ಏಗನೂರು ಅವರು ಪತ್ರಿಕಾ ಹೇಳಿಕೆ ಮೂಲಕ ತೆಲಂಗಾಣ ಸರಕಾರಕ್ಕೆ ಒತ್ತಾಯಿಸಿದರು.
ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ಧಾರಾವತ್ ಪ್ರೀತಿ ಅವರು ಫೆ. ೨೨ ರಂದು ಕರ್ತವ್ಯದಲ್ಲಿದ್ದಾಗ ವಾರಂಗಲ್‌ನ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಯ ಸಿಬ್ಬಂದಿ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಪ್ರೀತಿಯವರು ಕಾಕತೀಯ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂಡಿ ಅರಿವಳಿಕೆ ವಿದ್ಯಾರ್ಥಿಯಾಗಿದ್ದು, ಆಕೆಯ ಸೀನಿಯರ್ ಮೊಹಮ್ಮದ್ ಸೈಫ್ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕಾಲೇಜ್‌ನಲ್ಲಿ ದ್ವಿತೀಯ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಅದೇ ಕಾಲೇಜ್‌ನ ಸೀನಿಯರ್ ವಿದ್ಯಾರ್ಥಿಯಾದ ಮೊಹ್ಮದ್ ಶಫಿ ಇವನು ಪ್ರೀತಿಗೆ ಮಾನಸಿಕ ಕಿರುಕುಳ ಮತ್ತು ರಾಗಿಂಗ್ ನೀಡುತ್ತಿದ್ದನು. ಇದರಿಂದ ಬೇಸತ್ತ ಪ್ರೀತಿ ಅಲ್ಲಿನ ಕಾಲೇಜ್ ಆಡಳಿತ ಸಂಸ್ಥೆಗೆ ದೂರು ನೀಡಿದರೂ ಸಹ ಆಡಳಿತ ಸದಸ್ಯರು ಆರೋಪಿ ಯಾವುದೇ ರೀತಿಯ ಕ್ರಮಕೈಗೊಂಡಿರುವುದಿಲ್ಲ. ಮನನೊಂದ ಪ್ರೀತಿಯವರು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಕಳೆದ ವಾರದಮಹಾತ್ಮಾಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಲ್ಲಿನ ಸಿಬ್ಬಂದಿಗಳು ಕೂಡಲೇ ಆಸ್ಪತ್ರೆಗೆ ದಾಖಲೆ ಮಾಡಿರುತ್ತಾರೆ. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರದಂದು ಮೃತಪಟ್ಟಿರುತ್ತಾಳೆ.
ಆರೋಪಿ ಮೊಹ್ಮದ್ ಶಫಿಗೆ ಕಠಿಣ ಶಿಕ್ಷೆ ವಿಧಿಸುವಂತೆ ತೆಲಂಗಾಣ ಸರ್ಕಾರಕ್ಕೆ ಒತ್ತಾಯಿಸಿದರು.