
ಸಂಜೆವಾಣಿ ವಾರ್ತೆ
ಗಂಗಾವತಿ, ಏ.10: ನೇತ್ರದಾನ ಮಾಡುವುದುರಿಂದ ಕಣ್ಣು ಇಲ್ಲದವರಿಗೆ ಬೆಳಕು ನೀಡಿದಂತೆಯಾಗುತ್ತದೆ. ನೇತ್ರದಾನ ಮಹಾಕಾರ್ಯವಾಗಿದೆ ಎಂದು ಉಪವಿಭಾಗ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಹೇಳಿದರು. ಅವರು ಮಂಜುನಾಥನಗರದ ನಿವಾಸಿಯಾಗಿದ್ದ ನೇತ್ರದಾನಿ ತುಂಗಮ್ಮ ಶಂಬಣ್ಣ ಬಾಳಿಕಟ್ಟಿ ಇವರು ನಿಧನದ ನಂತರ ನೇತ್ರಗಳನ್ನು ಸಂಗ್ರಹಿಸಿ ಮಾತನಾಡಿದರು. ಮೃತನಾದ ನಂತರ ದೇಹದ ಅಂಗಾಂಗಗಳು ಉಪಯೋಗಕ್ಕೆ ಬರುತ್ತದೆ. ನೇತ್ರ ಸೇರಿದಂತೆ ಹಲವಾರು ಇನ್ನೊಬ್ಬರಿಗೆ ಅವಶ್ಯವಿರುವ ಅಂಗಾಂಗಗಳನ್ನು ದಾನ ಮಾಡುವುದು ಮಹಾ ಕಾರ್ಯವಾಗಿದೆ. ತುಂಗಮ್ಮ ಮರಣಕ್ಕೂ ಮುಂಚೆ ತಮ್ಮ ಎರಡು ನೇತ್ರಗಳನ್ನು ದಾನ ಮಾಡಿದ್ದರು. ಕುಟುಂಬದ ಮನವಿ ಮೇರೆಗೆ ನೇತ್ರಗಳನ್ನು ಸಂಗ್ರಹ ಮಾಡಲಾಗಿದ್ದು, ಜಿಲ್ಲಾಸ್ಪತ್ರೆಗೆ ನೇತ್ರಗಳನ್ನು ಕಳುಹಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಅಬೀದ್ ಹುಸೇನ್, ಮೃತರ ಕುಂಟುಂಬದ ಮಂಜುನಾಥ, ದ್ರಾಕ್ಷಾಯಿಣಿ ಇದ್ದರು.