ಮೃತ ಕುಟುಂಬಕ್ಕೆ 5 ಲಕ್ಷ ಚೆಕ್ ವಿತರಣೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ಏ.23:  ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ದಂದು ಬೀಸಿದ ಭಾರೀ ಗಾಳಿ, ಮಳೆಗೆ ಮನೆಯ ತಗಡಿನ ಮೇಲ್ಚಾವಣಿ ಬಿದ್ದು ನೆಟ್ಟು ದಡ್ಡಿ ನಾಗಮ್ಮ ಗಂಡ ದಡ್ಡಿ ಕರಿಬಸಪ್ಪ ಇವರಿಗೆ ತಲೆ ಒಡೆದು, ತೊಡೆ ಭಾಗದಲ್ಲಿ ಗಂಭೀರ ಗಾಯವಾಗಿ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಗಾಯಾಳು ಆರೋಗ್ಯ ಸ್ಥಿತಿ ಬಹಳ ಚಿಂತಾಜನಕವಾಗಿದ್ದರಿಂದ 19 ರಂದು ಸಂಜೆ ಚಿಕಿತ್ಸೆ ಫಲಿಸದೇ ಅಸುನೀಗಿದ್ದರು.
ಪ್ರಾಕೃತಿಕ ವಿಕೋಪದಡಿ ಕೊಟ್ಟೂರು ತಾಲ್ಲೂಕು ಆಡಳಿತದ ಕಂದಾಯ ಇಲಾಖೆಯ ಅಧಿಕಾರಿಗಳಾದ ಅಮರೇಶ್ ತಹಶಿಲ್ದಾರರು, ಹಾಲಸ್ವಾಮಿ ಕಂದಾಯ ನಿರೀಕ್ಷಕರು, ಕಂದಾಯ ಆಡಳಿತಾಧಿಕಾರಿಯಾದ ಶ್ರೀಮತಿ ಶಾರದಾ ಅವರು ಮೃತರ ಕುಟುಂಬಕ್ಕೆ 5 ಲಕ್ಷದ ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು.