ಮೃತ ಕುಟುಂಬಕ್ಕೆ ಶಾಸಕರು ಸಾಂತ್ವನ

ಮೃತ ಕುಟುಂಬಕ್ಕೆ ಶಾಸಕರು ಸಾಂತ್ವನಗಂಗಾವತಿ ನ.10: ತಾಲೂಕಿನ ಆನೆಗೊಂದಿ ಶ್ರೀ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದ ಹಿಂಭಾಗದಲ್ಲಿ ಇತ್ತೀಚೆಗೆ ಚಿರತೆ ದಾಳಿಗೆ ಬಲಿಯಾದ ಹುಲಿಗೇಶ ಅವರ ನಿವಾಸಕ್ಕೆ ಶಾಸಕ ಪರಣ್ಣ ಮನವಳ್ಳಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, ಸರ್ಕಾರದ ಮಟ್ಟದಲ್ಲಿ ಸಿಗುವ ಸೌಲಭ್ಯ ಕಲ್ಪಿಸಲಾಗವುದು. ಅಲ್ಲದೆ, ಈಗಾಗಲೇ ಅರಣ್ಯ ಇಲಾಖೆ 7 ಲಕ್ಷ ರೂ. ನೀಡಿದೆ. ಹುಲಗೇಶ ಅವರ ತಮ್ಮನಿಗೆ ದೇವಸ್ಥಾನದಲ್ಲಿ ಕೆಲಸ ಕೊಡುಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಚನ್ನಪ್ಪ ಮಳಿಗೆ, ನಗರಸಭೆ ಸದಸ್ಯ ಪರಶುರಾಮ್ ಮಡ್ಡೆರ್, ಮುಖಂಡರಾದ ಧನರಾಜ, ರಾಘವೇಂದ್ರ, ಬೋಗೇಶ, ಹರಕೇರಿ ಶಿವಕುಮಾರ್, ಸೇರಿದಂತೆ ಇತರರು ಇದ್ದರು.