ಮೃತ ಕುಟುಂಬಕ್ಕೆ ದೇವೇಂದ್ರಪ್ಪ ಸಾಂತ್ವನ

ಜಗಳೂರು, ನ.೧೮; ಇಲ್ಲಿನ ದೊಡ್ಡಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾಗಿ ಮೃತಪಟ್ಟಿರುವ ಮೃತ ಕುಟುಂಬಕ್ಕೆ ಕಾಂಗ್ರೆಸ್ ಮುಂಖಡರಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧನಸಹಾಯ ನೀಡಿದ್ದಾರೆ
ಮೃತ ಬಾಲಕರ ಪೋಷಕರು ತೀರ್ವ ಕಡುಬಡವರಾಗಿದ್ದು, ಅವರ ನೋವಿಗೆ ಸ್ಪಂದಿಸಿ ಅಲ್ಪ ಪ್ರಮಾಣದ ಧನಸಹಾಯ ನೀಡಿದರು. ಹಾಗೂ ಕುಟುಂಬಕ್ಕೆ ಧೈರ್ಯ ನೀಡುವ ಜೊತೆಯಲ್ಲಿ ಮುಂದಿನ ಕಾರ್ಯಕ್ಕೆ ಏನಾದರು ಸಹಕಾರ ಬೇಕಿದ್ದಲ್ಲಿ ತಮ್ಮನ್ನು ವೈಯಕ್ತಿವಾಗಿ ಸಂಪರ್ಕಿಸಿ ಎಂದರು.
ಈ ಸಂದರ್ಭದಲ್ಲಿ ಮುಂಡರಾದ ಕೆಚ್ಚೇನಹಳ್ಳಿ ಶಿವಣ, ಸಿ.ತಿಪ್ಪೇಸ್ವಾಮಿ, ಖಲೀಲ್ ಸಾಬ್, ಬಸವರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.