ಮೃತ  ಕಾರ್ಮಿಕರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ

ಜಗಳೂರು ಮಾ.30: ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ಚರಂಡಿ ಸ್ವಚ್ಚತೆ ಮಾಡುವ ವೇಳೆ ಮರಣ ಹೊಂದಿದ ಇಬ್ಬರು ಕಾರ್ಮಿಕರ ಕುಟುಂಬದವರಿಗೆ  ಶಾಸಕ ಎಸ್ ವಿ ರಾಮಚಂದ್ರಪ್ಪ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ವತಿಯಿಂದ ತಲಾ ೩ ಲಕ್ಷ ರೂ. ಹಾಗೂ ಶಾಸಕರು ವೈಯಕ್ತಿಕವಾಗಿ ತಲಾ ೫೦ ಸಾವಿರ ರೂ. ಪರಿಹಾರ ನೀಡಿ ಕುಟುಂಬದವರಿಗೆ  ಸಾಂತ್ವನ ಹೇಳಿದರು.        ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ಬಸವನಕೋಟೆ ಗ್ರಾಮದ ಮೈಲಪ್ಪ ಸತ್ಯಪ್ಪ ಎಂಬ ಇಬ್ಬರು ಗ್ರಾಮದಲ್ಲಿ ಚರಂಡಿ ಸ್ವಚ್ಚಗೊಳಿಸುವ ವೇಳೆ ಅಸ್ತವ್ಯಸ್ತಗೊಂಡು ಸಾವನ್ನಪ್ಪಿರುವುದು ಮನಸ್ಸಿಗೆ ಬಹಳ ದುಖ: ತರಿಸಿದೆ. ಈ ಕುಟುಂಬಗಳಿಗೆ ಪಂಚಾಯಿತಿ ವತಿಯಿಂದ ಒಟ್ಟು ತಲಾ ೬ ಲಕ್ಷ ರೂ. ದಂತೆ ಇಬ್ಬರು ಕಾರ್ಮಿಕರಿಗೆ ಪರಿಹಾರ ನೀಡಲಿದ್ದು ಇದೀಗ ೩ ಲಕ್ಷ ದಂತೆ  ಎರಡು ಕುಟುಂಬಸ್ತರಿಗೆ ೬ ಲಕ್ಷ ರೂಗಳ ಚೆಕ್ ವಿತರಿಸಿ ಅವರ ವಯಕ್ತಿಕವಾಗಿ ತಲಾ ೫೦.೦೦೦ .ತಲಾ ೫೦.೦೦೦ ಸಹಾಯಧನ ನೀಡಿದ್ದೇನೆ.

 ಪಂಚಾಯಿತಿಯಿAದ ಉಳಿದ  ಪರಿಹಾರ ನಗದನ್ನು ಒಂದು ವಾರದಲ್ಲಿಯೇ  ನೀಡಲು ಸೂಚಿಸಲಾಗಿದೆ. ತಂದೆಯನ್ನು ಕಳೆದುಕೊಂಡ ಮಕ್ಕಳಿಗೆ ಅವರ ಆರ್ಹತೆ ಅಧಾರದ ಮೇಲೆ ಗ್ರಾಮ ಪಂಚಾಯತಿಯಲ್ಲಿ ನೌಕರಿ ನೀಡಲಾಗುವುದು ಎಂದು ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಕಡತದಲ್ಲಿ ನಮೂದಿಸಲಾಗಿದೆ. ನೊಂದ ಸಂತ್ರಸ್ತರ ಕುಟುಂಬಕ್ಕೆ ನೌಕರಿ ನೀಡಿ ಭದ್ರತೆ ಒದಗಿಸಲಾಗುವುದು ಎಂದು ಭರವಸೆ ನೀಡಿದರಲ್ಲದೇ ನಿಮ್ಮ ಜೊತೆ ನಾವಿದ್ದೇವೆ. ಗ್ರಾಮದ ಜನರಿದ್ದಾರೆ. ಕಷ್ಟ ಸುಖದಲ್ಲಿ ಭಾಗಿಯಾಗುವೆ. ದೈರ್ಯವಾಗಿರಿ. ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಕುಟುಂಬದವರಿಗೆ ಸಾಂತ್ವನ ಹೇಳಿ ಶಾಸಕರು ದೈರ್ಯ ತುಂಬಿದರು.            

ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ ಸಂತೋಷಕುಮಾರ್, ತಾಪಂ ಇಓ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್, ಗ್ರಾಪಂ ಅಧ್ಯಕ್ಷರ ಪತಿ ಬೀಮಣ್ಣ. ಸೊಕ್ಕೆ ನಾಗರಾಜ್, ಶಶಿಧರ್. ಬಿಳಿಚೋಡು ಪೊಲೀಸ್ ಠಾಣೆ ಸಿಪಿಐ ಸೋಮಶೇಖರ್ ಕೆಂಚರೆಡ್ಡಿ, ಪಿಎಸ್‌ಐ ಕೆ ಓಂಕಾರಿನಾಯ್ಕ್. ರಘು, ಗ್ರಾಪಂ ಸದಸ್ಯರಾದ ದೇವರಾಜ್. ಪೂಜಾರಿ ಸಿದ್ದಪ್ಪ, ವಕೀಲ ಹನುಮಂತಪ್ಪ, ಕುಬೇರಪ್ಪ, ಪಿಡಿಓ ತಿಮ್ಮೇಶ್, ಗ್ರಾಮದ ಮುಖಂಡರು  ಸೇರಿದಂತೆ ಇತರರು ಇದ್ದರು.