ಮೃತರ ಮನೆಗೆ ಕೂಡ್ಲಿಗಿ ಶಾಸಕ ಭೇಟಿ – ಸಾಂತ್ವನ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಅ.24 :- ತಾಲೂಕಿನ ಗುಡೇಕೋಟೆ ಕೆರೆ ಬಳಿಯ ತಿರುವಿನಲ್ಲಿ ಬೈಕುಗಳ ನಡುವೆ ಜರುಗಿದ ಅಪಘಾತದಲ್ಲಿ  ತಂದೆ ಮಗಳು ಮೃತಪಟ್ಟಿದ್ದು ದುಃಖದ ಮಡುವಿನಲ್ಲಿರುವ ಮನೆಗೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿ ವೈಯಕ್ತಿಕ ಪರಿಹಾರ ನೀಡಿದ್ದಾರೆ ಹಾಗೂ ಅಪಘಾತದ  ಸ್ಥಳ ಪರಿಶೀಲನೆ ನಡೆಸಿ ಜನಾಭಿಪ್ರಾಯದಂತೆ ತಿರುವಿನ ರಸ್ತೆ ಕಿರಿದಾಗಿದ್ದು ಅಗಲೀಕರಣದಿಂದ ಅನುಕೂಲವಾಗಲು ಸ್ಥಳದಲ್ಲೇ ಸಚಿವರೊಂದಿಗೆ ಮಾತನಾಡಿ ಅನುದಾನ ನೀಡುವಂತೆ ಮನವಿ ಶಾಸಕರು ಮನವಿ ಮಾಡಿದರು.
ಕಳೆದೆರಡು ದಿನದ ಹಿಂದಷ್ಟೇ ತಾಲೂಕಿನ ಗುಡೇಕೋಟೆ ಸಮೀಪದ ಕೂಡ್ಲಿಗಿ ರಸ್ತೆಕಡೆಯ ಕೆರೆ ಬಳಿ ತಿರುವಿನ ರಸ್ತೆ ಇದ್ದು ಸ್ವಲ್ಪ ಕಿರಿದಾಗಿದ್ದು ಈ ಸ್ಥಳದಲ್ಲಿ ಅನೇಕ ಅಪಘಾತಗಳು ಜರುಗಿದ್ದು ಅನೇಕರ ಬಲಿ ತೆಗೆದುಕೊಂಡಂತೆ ಕಳೆದೆರಡು ದಿನದ ಹಿಂದೆ ಯರ್ರೋಬನಹಟ್ಟಿ ಕುಟುಂಬ ಪತಿ ಪತ್ನಿ ಮಗಳು ಬರುತ್ತಿರುವಾಗ್ಗೆ ಎದುರಿಗೆ ಬಂದ ಬೈಕ್ ಸವಾರನ ಡಿಕ್ಕಿಯಿಂದ ತಂದೆ ಮಗಳು ಸಾವನ್ನಪ್ಪಿರುವ ಘಟನೆ ಜರುಗಿದ್ದರ ಮಾಹಿತಿ ತಿಳಿದ ಶಾಸಕರು ಘಟನಾ ಸ್ಥಳದ ರಸ್ತೆಯ ಪರಿಶೀಲನೆ ನಡೆಸಿ ಸುತ್ತಮುತ್ತಲಿನ ಗ್ರಾಮಗಳ ಅಭಿಪ್ರಾಯದಂತೆ ರಸ್ತೆ ಅಗಲೀಕರಣ ಮಾಡುವ ಉದ್ದೇಶವಾಗಿ ಅಲ್ಲಿ ಸೇರಿದ ಜನರ ಸಮ್ಮುಖದಲ್ಲಿ ಸಚಿವರೊಂದಿಗೆ ಮೊಬೈಲ್ ಕರೆ ಮೂಲಕ ಚರ್ಚೆ ನಡೆಸಿದರು ಸಚಿವರು ಅಗಲೀಕರಣ ಮಾಡುವ ಭರವಸೆ ನೀಡಿದರು ಎಂದು ತಿಳಿದಿದೆ.
ಈ ಸಂದರ್ಭದಲ್ಲಿ ಗುಡೇಕೋಟೆ ಗ್ರಾಮಪಂಚಾಯಿತಿ ಅಧ್ಯಕ್ಷ ಕೃಷ್ಣ ಸೇರಿದಂತೆ ಇತರೆ ಸದಸ್ಯರು, ಯಾರ್ರೋಬನಹಟ್ಟಿ ಸೇರಿದಂತೆ ಇತರೆ ಸುತ್ತಮುತ್ತಲಿನ ಗ್ರಾಮದ ಮುಖಂಡರು ಹಾಜರಿದ್ದರು.

One attachment • Scan