
ಶಹಾಪುರ:ಮಾ.16: ಶಹಾಪುರ ತಾಲೂಕಿನಲ್ಲಿ ಹಲವಾರು ರೈತರ ಎತ್ತುಗಳು ಆಕಸ್ಮಿಕವಾಗಿ ಸಾವನಪ್ಪಿದ್ದು ರೈತರಿಗೆ ಸರ್ಕಾರದಿಂದ ಯಾವುದೇ ರೀತಿಯ ಪರಿಹಾರ ಬಂದಿರುವುದಿಲ್ಲ. ಮತ್ತು ಚರ್ಮಗಂಟು ರೋಗದಿಂದ ರೈತರ ನೂರಾರು ಜಾನುವಾರುಗಳು ಮೃತಪಟ್ಟಿದ್ದು, ಇನ್ನು ಬಹಳಷ್ಟು ರೈತರಿಗೆ ಪರಿಹಾರ ಸಿಕ್ಕಿಲ್ಲ ಆದ್ದರಿಂದ ರೈತರಿಗೆ ಆದಷ್ಟು ಬೇಗ ಸೂಕ್ತ ಪರಿಹಾರ ನೀಡಬೇಕು ಮತ್ತು ರೈತರ ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕೆಯು ಪ್ರತಿಶತ ನೂರರಷ್ಟು ಜಾನುವಾರುಗಳಿಗೆ ಲಸಿಕೆ ನೀಡಬೇಕು ಚರ್ಮಗಂಟು ರೋಗ, ಕಾಲುಬಾಯಿ ರೋಗ ಮತ್ತು ಮೇವಿನ ಕೊರತೆಯಿಂದ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಕುಸಿದಿದೆ, ಸಾಂಪ್ರದಾಯಿಕ ಕೃಷಿಗೆ ಗೋವುಗಳು ಅವಿಭಾಜ್ಯ ಅಂಗಗಳಾಗಿವೆ.ಕಳೆದ ಎರಡು ವರ್ಷದಲ್ಲಿ ರಾಜ್ಯದಲ್ಲಿ 15 ಲಕ್ಷ ಗೋವುಗಳು ಕಾಣೆಯಾಗಿವೆ ಎಂದು ಪಶು ಸಂಗೋಪನಾ ಇಲಾಖೆ ವರದಿ ನೀಡಿದೆ. ವೈರಾಣು ಸೋಂಕಿತ ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಲಾಗದೇ ಪರದಾಡುತ್ತಿದ್ದಾರೆ ರೈತರು ಜಾನುವಾರುಗಳ ಜೀವ ಉಳಿಸಿಕೊಳ್ಳಲು ಪಶು ಸಂಗೋಪನಾ ಇಲಾಖೆಯ ಮುಂದೆ ಗೋಗರೆಯುತ್ತಿದ್ದಾರೆ ಅಗತ್ಯ ಚಿಕಿತ್ಸೆ ನೀಡಲು ಪಶು ಸಂಗೋಪನಾ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಇಲಾಖೆಯಲ್ಲಿನ ಸಿಬ್ಬಂದಿಯ ಕೊರತೆ ಇರುತ್ತದೆ. ಸರ್ಕಾರವು ಆದಷ್ಟು ಬೇಗನೆ ಪಶು ವೈದ್ಯರ ನೇಮಕ ಮಾಡಿಕೊಳ್ಳಬೇಕು ಮತ್ತು ಶಹಾಪುರ ತಾಲೂಕಿನಲ್ಲಿ ಪಶು ಸಂಗೋಪನಾ ಇಲಾಖೆಗೆ ಸಂಚಾರಿ ತುರ್ತು ಚಿಕಿತ್ಸಾ ವಾಹನಾ ಸರ್ಕಾರವು ನೀಡಿರುತ್ತದೆ. ಆದರೆ ವೈದ್ಯರು ಮತ್ತು ಚಾಲಕರ ಕೊರತೆಯಿಂದ ಇಲಾಖೆಯ ವಾಹನವು ರೈತರಿಗೆ ಪ್ರಯೋಜನವಾಗುತ್ತಿಲ್ಲ. ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದರೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಶಾಂತಗೌಡ ಮುಡಬೂಳ ಉಗ್ರವಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.