ಮೃತಪಟ್ಟಇಬ್ಬರು ಬಾಲಕರ ಕುಟುಂಬಕ್ಕೆ ಶಾಸಕ ಭೇಟಿ-ಸಾಂತ್ವನ

ಅರಕೇರಾ.ಜ.೧೧- ದೇವದುರ್ಗ ತಾಲ್ಲೂಕಿನಲ್ಲಿ ಮಲ್ಲೇದೇವರಗುಡ್ಡ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಪೂಜಾರಿ ಸೀತಮ್ಮ ತಾಂಡದಲ್ಲಿ ದಿ.೮ರಂದು ಈಜಾಡಲು ಪಕ್ಕದಲ್ಲಿರುವ ಕಲ್ಲಿನಕ್ವಾರೆಯಲ್ಲಿ ಹೋಗಿದ್ದ ಇಬ್ಬರೂ ಬಾಲಕರು ಕ್ವಾರೇಯಲ್ಲಿ ಸಿಕ್ಕಿ ಹಾಕಿಕೊಂಡು ಮೃತಪಟ್ಟ ಸಂತೋಷ ತಂದೆ ವೆಂಕಟೇಶ ರಾಠೋಡ (೧೫) ಮಂಜುನಾಥ ವೆಂಕಟೇಶ ರಾಠೋಡ (೧೩) ದೇವದುರ್ಗ ಶಾಸಕರಾದ ಕೆ. ಶಿವನಗೌಡ ನಾಯಕರವರು ಕುಟುಂಬ ವರ್ಗದವರನ್ನು ಭೇಟಿ ನೀಡಿ ತಂದೆ ತಾಯಿಗೆ ಸ್ವಾಂತನ ಹೇಳಿದರು.
ಅಧಿಕಾರಿಗಳೊಂದಿಗೆ ಚರ್ಚಿಸಿ ಸರಕಾರದಿಂದ ಬರುವ ಪರಿಹಾರ ದೊರಿಸಿಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಾಲಪ್ಪ ನಾಯಕ, ಮಲ್ಲೇದೇವರಗುಡ್ಡ, ಶಂಕರಪ್ಪ ಬಂಡೆಗುಡ್ಡ ಹಾಗೂ ಗ್ರಾಮಸ್ಥರು ಉಪಸ್ಥರಿದ್ದರು