ಮೃತನ ವಾರಸುದಾರರ ಪತ್ತೆಗೆ ಮನವಿ


ಬಳ್ಳಾರಿ,ಏ.12: ನಗರದ ಮುಂಡ್ರಗಿ ಇಂಡಸ್ಟ್ರಿಯಲ್ ಏರಿಯಾದ 2ನೇ ಸ್ಟೇಜ್ ಬಳಿ ವಾಸವಿದ್ದು, ಅಲ್ಲಿಯೆ ಟೀ ಹೋಟಲ್ ವ್ಯಾಪಾರ ಮಾಡುತ್ತಿದ್ದ ಸಿರುಗುಪ್ಪ ಮೂಲದ ವೆಂಕಟೇಶ ಎನ್ನುವ 30 ವರ್ಷದ ವ್ಯಕ್ತಿ ಟಿಬಿ ಖಾಯಿಲೆಯಿಂದ ಬಳಲುತ್ತಿದ್ದ ಕಾರಣ ಜಿಗುಪ್ಸೆಗೊಂಡು, ಏ.07 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿ ಮೃತ ಪಟ್ಟ ಪ್ರಕರಣ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಮೃತನ ವಾರಸುದಾರ ಪತ್ತೆಗೆ ಸಹಕರಿಸಬೇಕೆಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ಅವರು ಮನವಿ ಮಾಡಿದ್ದಾರೆ.
 ಮೃತನ ಚಹರೆ ಗುರುತು ತಿಳಿದಿರುವುದಿಲ್ಲ.
ಮೃತನ ವಾರಸುದಾರ ಬಗ್ಗೆ ಮಾಹಿತಿ  ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ:08392276461, ಮೊ:9480803049 ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂ:08392258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.