ಮೃಣಾಲ್ ಠಾಕೂರ್ ಗೆ ಬಂಪರ್ ಆಫರ್

ಮುಂಬೈ,ಏ.೨೦-ಭಾರತೀಯ ಚಿತ್ರರಂಗದಲ್ಲಿ ಏಕಕಾಲಕ್ಕೆ ಬಾಲಿವುಡ್ ಮತ್ತು ತೆಲುಗು ಚಿತ್ರೋದ್ಯಮದಲ್ಲಿ ಮಿಂಚುತ್ತಿರುವ ನಾಯಕಿಯರಲ್ಲಿ ಯುವ ನಾಯಕಿ ಮೃಣಾಲ್ ಠಾಕೂರ್ ಕೂಡ ಒಬ್ಬರು ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ಇತ್ತೀಚಿಗೆ ಟಾಲಿವುಡ್‌ನಲ್ಲಿ ಆಕೆಯ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದು, ಟಾಪ್ ಹೀರೋಗಳು ಮತ್ತು ಟಾಪ್ ನಿರ್ಮಾಪಕರು ಆಕೆಯ ಡೇಟ್‌ಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಹೀಗಿರುವಾಗ ಭಾರತದಲ್ಲೇ ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡುವ ಬ್ಲಾಕ್ ಬಸ್ಟರ್ ನಿರ್ದೇಶಕರು ಬಂಪರ್ ಆಫರ್ ಕೊಟ್ಟಿದ್ದಾರೆ.
ತೆಲುಗಿನಲ್ಲಿ ಹ್ಯಾಟ್ರಿಕ್ ಹೊಡೆಯಲು ರೆಡಿಯಾಗಿರುವ ಮೃಣಾಲ್ ಗೆ ಬಾಲಿವುಡ್ ನಲ್ಲಿ ಭರ್ಜರಿ ಆಫರ್ ಬಂದಿದೆ. ಹಿಂದಿ ಚಿತ್ರರಂಗದಲ್ಲಿ ಸೆನ್ಸೇಷನಲ್ ಸಿನಿಮಾಗಳನ್ನು ನೀಡಿದ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲಿ ನಾಯಕಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.ಬಾಲಿವುಡ್‌ನ ಹಾಟ್ ಹೀರೋ ಸಿದ್ಧಾಂತ್ ಚತುರ್ವೇದಿಗೆ ಮೃಣಾಲ್ ನಾಯಕಿಯಾಗಿದ್ದಾರೆ. ಮುಂದಿನ ವಾರದಿಂದ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ ಎನ್ನಲಾಗಿದೆ.
ಮೃಣಾಲ್ ಠಾಕೂರ್ ಹಿಂದಿ ಚಲನಚಿತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ ಆರಂಭದಲ್ಲಿ ಒಳ್ಳೆಯ ಚಿತ್ರಗಳಲ್ಲಿ ನಟಿಸಿದರೂ ಅಷ್ಟೊಂದು ಜನಪ್ರಿಯತೆ ಸಿಗಲಿಲ್ಲ. ಹೃತಿಕ್ ಜೊತೆಗಿನ ಸೂಪರ್ ೩೦ ಸಿನಿಮಾ ಮತ್ತು ಶಾಹಿದ್ ಕಪೂರ್ ಜೊತೆಗಿನ ಜೆರ್ಸಿ ಸಿನಿಮಾಗೆ ಸ್ಟಾರ್ ಹೀರೋಯಿನ್ ಸ್ಟೇಟಸ್ ಸಿಕ್ಕಿದೆ.