ಮೃಡದೇವ ಗವಾಯಿ ಪಂಚಾಕ್ಷರಿ ಗವಾಯಿಗಳ ಪ್ರೀತಿಯ ಶಿಷ್ಯ

ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:.17 ಪುಟ್ಟರಾಜ ಗವಾಯಿಗಳಂತೆ ಮೃಡದೇವ ಗವಾಯಿಗಳು ಪಂಚಾಕ್ಷರಿ ಗವಾಯಿಗಳ ಪ್ರೀತಿಗೆ ಪಾತ್ರರಾಗಿದ್ದರು ಎಂದು ನಂದಿಪುರ ಪುಣ್ಯಕ್ಷೇತ್ರದ ಡಾ.ಮಹೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ನಂದಿಪುರ ಪುಣ್ಯಕ್ಷೇತ್ರದಲ್ಲಿ ಶ್ರೀಗುರು ದೊಡ್ಡಬಸವೇಶ್ವರ ಫೌಂಡೇಶನ್ ಹಾಗೂ ಹಾವೇರಿ ಹುಕ್ಕೇರಿ ಮಠದ ಸಂಯುಕ್ತಾಶ್ರಯದಲ್ಲಿ ನಡೆದ ಕರ್ನಾಟಕ ರಂಗಭೂಮಿಯ ಅನಘ್ರ್ಯರತ್ನ, ಸರ್ವಶ್ರೇಷ್ಠ ರಂಗನಾಯಕ-ಗಾಯಕ ನಟರಾಜ ರತ್ನ ಮೃಡದೇವ ಗವಾಯಿಗಳವರ ಸೇವಾ ಸಮಿತಿ ಟ್ರಸ್ಟಿನ ಪ್ರಥಮ ಸಭೆಯಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಪಂಚಾಕ್ಷರಿ ಗವಾಯಿಗಳ ಸಂಗೀತಕ್ಕೇ ಸಾತ್ ನೀಡಿದ ಮೃಡದೇವ ಗವಾಯಿಗಳು ಸಂಗೀತ ಹಾಗೂ ರಂಗಭೂಮಿಯ ಅನಘ್ರ್ಯರತ್ನರಾಗಿದ್ದರು. ಅವರ ಜನ್ಮ ಶತಮಾನೋತ್ಸವದ ಕಾರ್ಯಕ್ರಮಗಳನ್ನು ನಾಡಿನಲ್ಲೆಲ್ಲ ನಡೆಸಬೇಕಾಗಿದೆ. ಅವರ ಜನ್ಮಸ್ಥಳವಾದ ಹೊಸಹಳ್ಳಿ ಸ್ಮಾರಕ ನಿರ್ಮಾಣ ಮಾಡುವ ಮೂಲಕ ರಂಗ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ಧ ಗಂಗಾವತಿಯ ಹಿರಿಯ ಸಾಹಿತಿ ಎಸ್.ವ್ಹಿ.ಪಾಟೀಲ್ ಗುಂಡೂರು ಹಾಗೂ ಮೃಡದೇವ ಗವಾಯಿಗಳ ಸೇವಾ ಟ್ರಸ್ಟಿನ ಅಧ್ಯಕ್ಷ ಎಸ್.ವಿ.ಪಾಟೀಲ್ ಗುಂಡೂರು ಮಾತನಾಡಿ, ಮೃಡದೇವ ಗವಾಯಿಗಳವರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ನಾಡಿನ ಪ್ರಮುಖ ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ಆತ್ಮ ವಿಶ್ವಾಸ ಮೂಡಿಸಿದ ಗ್ರಾಮೀಣ ಹವ್ಯಾಸಿ ರಂಗಭೂಮಿಯ ಕಲೆಯನ್ನು ಉಳಿಸಿ ಬೆಳೆಸಬೇಕಿದೆ ಎಂದರು. ಯುವಕರಲ್ಲಿ ರಂಗಭೂಮಿಯ ಕಲೆಯನ್ನು ನೀಡುವುದರ ಮೂಲಕ ಅದಮ್ಯ ಚೇತನ ಮೃಡದೇವ ಗವಾಯಿಗಳ ಸಂಗೀತ, ರಂಗಭೂಮಿಯ ಕಲೆಯನ್ನು ಬೆಳೆಸಬೇಕು ಎಂದರು. ಕಾಲಗರ್ಭದಲ್ಲಿ ಮರೆಯಾಗಿ ಹೋಗುತ್ತಿರುವ ನಮ್ಮ ಜನಪದ ಕಲೆಗಳಿಗೆ ಮರುಜೀವ ನೀಡಬೇಕಿದೆ ಎಂದು ಹೇಳಿದರು. ಮೃಡದೇವ ಗವಾಯಿಗಳ ಹೆಸರಿನಲ್ಲಿ ಪ್ರಶಸ್ತಿಯನ್ನು ನಾಡಿನಾದ್ಯಂತ ನೀಡುವಂತಾಗಬೇಕು ಎಂದರು.
ಕಂಪ್ಲಿಯ ಹೇಮಯ್ಯಸ್ವಾಮಿ, ಸಿದ್ರಾಮಯ್ಯ, ಬಸವರಾಜ, ಹರಪನಹಳ್ಳಿಯ ಸದ್ಯೋಜಾತಯ್ಯ ಮಾತನಾಡಿದ ಅವರು ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ರಂಗ ತರಬೇತಿ ಶಿಬಿರಗಳನ್ನು ಆಯೋಜಿಸಬೇಕಿದೆ ಎಂದರು.. ರಾಜೇಶ್ವರಿ, ನಂದೀಶ್ವರ ವಿವಿದೋದ್ದೇಶ ಸಹಕಾರಿ ನಿಯಮಿತ ಬ್ಯಾಂಕಿನ ಅಧ್ಯಕ್ಷ ಎನ್. ವೆಂಕಣ್ಣ, ಚನ್ನಯ್ಯಸ್ವಾಮಿ, ಸತೀಶ್ ಹಿರೇಮಠ, ಇತರರು ಉಪಸ್ಥಿತರಿದ್ದರು.
ಕರಿಬಸವನಗೌಡ ಪ್ರಾರ್ಥಿಸಿದರು. ಬೂದನೂರು ಸಿಂಧೂರಿಯವರು ಸ್ವಾಗತಿಸಿದರು. ಜಾಲಿಹಾಳ ಕಾಲೇಜಿನ ಪ್ರಾಚಾರ್ಯ ಮುರುಡಯ್ಯಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ನಿರ್ವಹಿಸಿದರು.