ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯಿರಿ: ದರ್ಶನ್ ಮನವಿ

ಮೈಸೂರು: ಜೂ.06: ಕೋವಿಡ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಅವುಗಳ ಜೀವ ರಕ್ಷಣೆ ಮಾಡಬೇಕು ಎಂದು ನಟ, ಅರಣ್ಯ ಇಲಾಖೆ ರಾಯಭಾರಿ ದರ್ಶನ್ ಮನವಿ ಮಾಡಿದ್ದಾರೆ.
ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಅವರು, ಮನೆಯಲ್ಲಿ ಪ್ರಾಣಿ ಸಾಕಲು ಎಲ್ಲರಿಗೂ ಆಗಲ್ಲ. ಆದರೆ, ಮೃಗಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯಬಹುದು. ಒಂದು ಲವ್ ಬರ್ಡ್‍ಗೆ 1000 ರೂ., ಹುಲಿಗೆ 1 ಲಕ್ಷ ರೂ. ಹಣ ಕಟ್ಟಬೇಕು ಎಂದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿಪ್ರತಿ ತಿಂಗಳೂ ಕಟ್ಟಬೇಕಿಲ್ಲ, ವರ್ಷಕ್ಕೊಮ್ಮೆ ಹಣ ಪಾವತಿ ಮಾಡಬೇಕು. ಈ ಹಣಕ್ಕೆ ತೆರಿಗೆ ವಿನಾಯಿತಿ ಕೂಡ ಸಿಗುತ್ತೆ ಎಂದು ತಿಳಿಸಿದ್ದಾರೆ.