ಮಾನ್ವಿ ಜು ೩೧ :- ತಾಲೂಕಿನ ಮುಸ್ಟೂರು-ಮಾನ್ವಿ ಸಂಪರ್ಕ ಸೇತುವೆ ಕಾಮಗಾರಿ ನಿರ್ಮಾಣಕ್ಕಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಹಾಗೂ ಶಾಸಕ ಜಿ ಹಂಪಯ್ಯ ನಾಯಕ ಬೇಟಿ ನೀಡಿ ಸಣ್ಣ ನೀರಾವರಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಶೀಘ್ರವಾಗಿ ಈ ಸೇತುವೆಯ ವರದಿ ತಯಾರಿಸಿ ಆದಷ್ಟೂ ಬೇಗನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಗ್ರಾಮದ ಸೇತುವೆ ಪಕ್ಕದ ರೈತರ ಜಮೀನುಗಳಿಗೆ ತೊಂದರೆಯಾಗದಂತೆ ತಡೆಗೋಡೆ ನಿರ್ಮಿಸಬೇಕೆಂದು ಹಾಗೂ ಇದಕ್ಕೆ ಶಾಶ್ವತ ಪರಿಹಾರ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಸಣ್ಣ ನೀರಾವರಿ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರಿಗೆ ಹಾಗೂ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದೊಡ್ಡ ಬಸಪ್ಪಗೌಡ, ಬಾಲಸ್ವಾಮಿ ಕೊಡ್ಲಿ, ಸೈಯಾದ್ ಖಾಲೀದ್ ಖಾದ್ರಿ, ಡಾ ಯಂಕನಗೌಡ ಬೊಮ್ಮನಾಳ, ಚಂದ್ರಶೇಖರ ಕುರ್ಡಿ, ಚನ್ನಬಸಪ್ಪಗೌಡ ಬೆಟ್ಟದೂರು, ಮಹಾತೇಶ ಸ್ವಾಮಿ ರೌಡೂರು, ಮಲ್ಲೇಶ ಜಗ್ಲಿ ಹಾಗೂ ಮೂಸ್ಟೂರು ಗ್ರಾಮದ ಮುಖಂಡರು ಸಾವಿರಾರು ಜನರಿದ್ದರು.