ಮೂವರು ಸುಲಿಗೆಕೋರರ ಬಂಧನ

ಕಲಬುರಗಿ,ಮೇ.28-ನಗರದ ರಿಂಗ್ ರೋಡ್ ಗೆ ಹೊಂದಿಕೊಂಡಿರುವ ನಿರ್ಜನ ಪ್ರದೇಶಗಳಲ್ಲಿ ರಾತ್ರಿ ವೇಳೆ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಅಡಗಿ ಕುಳಿತು ಜನರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಮೂವರು ಸುಲಿಗೆಕೋರರನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ನಗರದ ಛೋಟಾ ರೋಜಾದ ಮಿರ್ಜಾ ಇಮ್ರಾನ್ ಬೇಗ್, ಮಿರ್ಜಾ ಜುಬೇರ್ ಬೇಗ್ ಮತ್ತು ಫಿರ್ದೋಸ್ ಕಾಲೋನಿಯ ಮಹ್ಮದ್ ಶೇಮೀರ್ ಎಂಬುವವರನ್ನು ಬಂಧಿಸಿ 3 ಲಕ್ಷ ರೂಪಾಯಿ ಬೆಲೆ ಬಾಳುವ ಒಂದು ಆಟೋ, ಮೂರು ಬೈಕ್, 5 ಮೊಬೈಲ್ ಮತ್ತು ಹಣ ಸುಲಿಗೆ ಮಾಡಲು ಬಳಸಿದ ಚಾಕು ಜಪ್ತಿ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತ ವೈ.ಎಸ್.ರವಿಕುಮಾರ, ಉಪ ಪೊಲೀಸ್ ಆಯುಕ್ತರಾದ ಡಿ.ಕಿಶೋರ ಬಾಬು, ಶ್ರೀಕಾಂತ ಕಟ್ಟಿಮನಿ, ಸಿ ಉಪ ವಿಭಾಗದ ಎಸಿಪಿ ಜೆ.ಹೆಚ್.ಇನಾಮದಾರ ಮಾರ್ಗದರ್ಶನದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಪಿಐ ಬಾಷು ಚವ್ಹಾಣ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿರಾಜ್ ಪಟೇಲ್, ಅಂಬಾಜಿ, ಮಲ್ಲಿಕಾರ್ಜುನ, ನಾಗೇಂದ್ರ, ಪ್ರಕಾಶ ಮತ್ತು ಪ್ರಶಾಂತ ಅವರು ದಾಳಿ ನಡೆಸಿ ಸುಲಿಗೆಕೋರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಈ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು ಮತ್ತು ಎ.ಸಿ.ಪಿ.ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.