ಮೂವರು ವೀರರು ದೇಶಕ್ಕಾಗಿಯೇ ತಮ್ಮ ಪ್ರಾಣವನ್ನು ನೀಡಿದರುಃ ವಿವೇಕಾನಂದ ಡಬ್ಬಿ

????????????????????????????????????

ವಿಜಯಪುರ, ಮಾ.25-ನಗರದ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ನಗರ ಮಂಡಲದ ವತಿಯಿಂದ ಕ್ರಾಂತಿಕಾರಿ ತ್ರಿವಳಿ ದೇಶ ಭಕ್ತರಾದ ಭಗತ ಸಿಂಗ್, ರಾಜಗುರು, ಸುಖದೇವ್ ಅವರ ಬಲಿದಾನದ ಸ್ಮರಣೆ ಅಂಗವಾಗಿ ಶಿವಾಜಿ ಮಹಾರಾಜರ ವೃತ್ತದಿಂದ ನೂರಾರು ಕಾರ್ಯಕರ್ತರು ಮತ್ತು ಉತ್ಸಾಹಿ ಯುವಕರು ಪಕ್ಷದ ಮುಖಂಡರು ಸೇರಿ ಪಂಜಿನ ಮೆರವಣಿಗೆ ಗಾಂಧಿ ವೃತ್ತದ ವರೆಗೆ ನಡೆಸಿ ನಂತರ ಗಾಂಧಿ ವೃತ್ತದಲ್ಲಿ ತ್ರಿವಳಿ ದೇಶ ಭಕ್ತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರುಗಳ ತ್ಯಾಗವನ್ನು ಮೆಲಕು ಹಾಕಿ ಸಾರ್ವಜನಿಕರಿಂದ 1111 ಮೋಂಬತ್ತಿಯನ್ನು ಬೆಳಗಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಓಬಿಸಿ ಮೊರ್ಚಾ ಕಾರ್ಯದರ್ಶಿಗಳಾದ ವಿವೇಕಾನಂದ ಡಬ್ಬಿ ಮಾತನಾಡಿ, ಮಾರ್ಚ 23 ತಾರೀಖು ಎಲ್ಲರೂ ಸದಾ ನೆನಪಿಟ್ಟುಕೊಳ್ಳಬೇಕಾದ ದಿನ. ಈ ದಿನ ಮೂವರು ವೀರರು ದೇಶಕ್ಕಾಗಿಯೇ ತಮ್ಮ ಪ್ರಾಣವನ್ನು ನೀಡಿದರು. ಬ್ರೀಟಿಷರ ವಿರುದ್ಧ ಹೋರಾಟಕ್ಕೆ ಭಾರತ ಮಾತೆಯನ್ನು ದಾಸ್ಯದ ಸಂಕೋಲೆಯಿಂದ ಬಿಡುಸುವುದಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮೂವರು ಸ್ವಾತಂತ್ರ್ಯ ಸೇನಾನಿಗಳು ಹುತಾತ್ಮರಾದ ದಿನವಾಗಿದೆ. ಇದೊಂದು ಇತಿಹಾಸ ಪುಟದಲ್ಲಿ ಎಂದು ಮರೆಯಲಾಗದ ದಿನ ಇದಾಗಿದೆ. ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‍ಸಿಂಗ್, ಸುಖದೇವ, ರಾಜಗುರು ಎಂಬ ಹೆಸರೇ ದೇಸ ಪ್ರೇಮದ ಸ್ಪೂರ್ತಿ ಎಂತಹ ಸನ್ನಿವೇಷದಲ್ಲಿ ಕುಗ್ಗದೇ ಬ್ರೀಟಿಷರ ವಿರುದ್ಧ ಎದೆ ಉಬ್ಬಿಸಿ ಹೋರಾಟ ಗೈದಿದ್ದಾರೆ. ಇವರು ದಾರಿಯಲ್ಲಿ ಇಂದಿನ ಯುವಕರು ದೇಶಕ್ಕಾಗಿ ದುಡಿಯಬೇಕಾಗಿದೆ ಎಂದರು.
ನಗರ ಯುವ ಮೋರ್ಚಾ ಅಧ್ಯಕ್ಷರಾದ ಸತೀಶ ಪಾಟೀಲ್ ಮಾತನಾಡಿ, ಹುತಾತ್ಮ ಭಗತಸಿಂಗ್, ಸುಖದೇವ, ರಾಜಗುರು ಅವರಿಗೆ ಅವರ ಬಲಿದಾನದ ದಿನದಂದು ಶ್ರದ್ಧಾಂಜಲಿ ಅವರ ಮಹೊನ್ನತ ತ್ಯಾಗ ನಮ್ಮನ್ನಿಂದು ಸ್ವತಂತ್ರರನ್ನಾಗಿ ಮಾಡಿದೆ. ಅವರು ಎಂದಿಗೂ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಛಳೆಯದೇ ಉಳಿಯುತ್ತಾರೆ. ಹುತಾತ್ಮ ದಿನ ಬಲಿದಾನ ದಿನ ಅಥವಾ ಶಃಈದ್ ದಿವಸ್ ಎಂದು ಆಚರಿಸಲಾಗುತ್ತದೆ. ಈ ಮೂವರ ತ್ಯಾಗ ಈ ಭೂಮಿ ಇರುವ ತನಕ ಶಾಶ್ವತ ಇವರ ಹೋರಾಟದ ಕಿಚ್ಚು ಇಂದಿಗೂ ಎಲ್ಲರಲ್ಲೂ ದೇಶ ಪ್ರೇಮ ಜಾಗೃತಗೊಳಿಸುತ್ತಿದೆ.
ಇದೇ ಸಂದರ್ಭದಲ್ಲಿ ನಗರ ಮಂಡಲದ ಅಧ್ಯಕ್ಷರಾದ ಮಳುಗೌಡ ಪಾಟೀಲ್ ಮಾತನಾಡಿದರು.
ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಮಲ್ಲಮ್ಮ ಜೋಗುರ, ರವಿಕಾಂತ ಬಗಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ರಾಜೇಶ ತಾವಸೇ, ಶ್ರೀಕಾಂತ ಶಿಂದೆ, ಭಿಮಾಶಂಕರ ಹದನೂರ, ಭರತ ಕೋಳಿ, ಪಾಪುಸಿಂಗ ರಜಪೂತರ, ಸುರೇಶ ಬಿರಾದಾರ, ಬಸವರಾಜ ಬೈಚಬಾಳ, ವಿಜಯ ಜೋಶಿ, ಪರಶುರಾಮ ರಜಪೂತ, ಶಿವಾನಂದ ಭುಯ್ಯಾರ, ಗೀತಾ ಕುಗನೂರ, ರಾಹುಲ ಜಾಧವ, ರಾಜೇಂದ್ರ ವಾಲಿ, ಸಾಗರ ಪಂಗಡವಾಲೆ, ಹರೀಶ ಪವಾರ, ಭಾರತಿ ಭುಯ್ಯಾರ, ಕೃಷ್ಣಾ ಗುನ್ನಾಳಕಾರ, ರಾಜೇಂದ್ರ ವಾಲಿ, ಸಚೀನ ಮಸಳಿ, ವಿಠ್ಠಲ ನಡುವಿನಕೇರಿ, ತುಷಾರ ಪವಾರ, ಸಮೀರ ಸುಲಾಖೆ, ಸದಾಶಿವ ಬುಟಾಳೆ, ಉಮೇಶ ವೀರಕರ, ಕೃಷ್ಣಾ ಮಾಯಾಚಾರಿ, ಗಣೇಶ ಹಜೇರಿ, ಅಜೆಯ್ ಕರಾಳೆ, ರಾಮಚಂದ್ರ ಚವ್ಹಾಣ, ಸಂತೋಷ ನಿಂಬರಗಿ, ದಶರತ ಕ್ಷೀರಸಾಗರ, ಪ್ರವೀಣ ಕೂಡಗಿ, ಅನೀಲ ಉಪ್ಪಾರ, ಸಂದೀಫ ಪಾಟೀಲ್, ವಾರೀಶ್ ಕುಲಕರ್ಣಿ, ಸಮೀರ ಕುಲಕರ್ಣಿ, ವಿನಾಯಕ ದಹಿಂಡೆ ಹಾಗೂ ಬಿಜೆಪಿ ಮುಖಂಡರು ಪದಾಧಿಕಾರಿಗಳ ಹಾಜರಿದ್ದರು.
ಆನಂದ ಮುಚ್ಚಂಡಿ ಸ್ವಾಗತಿಸಿದರು. ಸುನೀಲ ಜೈನಾಪೂರ ವಂದಿಸಿದರು.