ಮೂವರು ಮಹಿಳೆಯರಿಗೆ  ಹಲ್ಲೆ ಆರೋಪ: ದೂರು

 

ಶಂಕರನಾರಾಯಣ, ಸೆ.೨೦- ಬೆಳ್ವೆ ಗ್ರಾಮದ ಗುಮ್ಮಹೊಲ ಎಂಬಲ್ಲಿನ ಸಂತ ಜೊಸೇಫರ ಚರ್ಚಿನ ಧರ್ಮಗುರುಗಳ ಪ್ರಚೋದನೆಯಿಂದ ಮೂವರು ಮಹಿಳೆಯರಿಗೆ ಹಲ್ಲೆ ನಡೆಸಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಲ್ಲೆಗೆ ಒಳಗಾದವರನ್ನು ಗುಮ್ಮಹೊಲದ ಶಾಂತಿ ಡೇಸಾ, ಪ್ರಿಯಾ ಡಿಸೋಜ ಹಾಗೂ ಸ್ಯಾಂಡ್ರಾ ಎಂದು ಗುರುತಿಸಲಾಗಿದೆ. ಇವರು ಹೆಬ್ರಿ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆAದು ತಿಳಿದುಬಂದಿದೆ. ಭಕ್ತರೊಂದಿಗೆ ವಿನಾ ಕಾರಣ ಜಗಳ ಮಾಡುತ್ತಿರುವುದರಿಂದ ಚರ್ಚಿನ ಧರ್ಮಗುರು ಅಲೆಕ್ಸಾಂಡರ್ ಲೂಯಿಸ್ ಹಾಗೂ ಶಾಂತಿ ಡೇಸಾಗೆ ಮನಸ್ತಾಪ ಇದ್ದು, ಚರ್ಚ್ ನಲ್ಲಿ ನಡೆದ ಪ್ರಾರ್ಥನೆ ವೇಳೆ ಧರ್ಮಗುರು ಪ್ರಾರ್ಥನೆ ಹಾಳು ಮಾಡಿ ಭಕ್ತರಿಗೆ  ಬೆದರಿಕೆ ಹಾಕಿ ಹೋಗಿದ್ದರು. ಸೆ.೧೮ರಂದು ಈ ಮೂವರು ಚರ್ಚ್ ಬಳಿ ಹಾಸ್ಟೆಲ್‌ಗೆ ನೀರು  ಕುಡಿಯಲು ಹೋದಾಗ ಆರೋಪಿಗಳಾದ ಪ್ರವೀಣ್ ಹಾಗೂ ಆತನ ತಂದೆ, ಧರ್ಮಗುರುವಿನ ಪ್ರಚೋದನೆಯಿಂದ ಹಲ್ಲೆ  ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.