ಕಲಬುರಗಿ,ಜೂ 30: ನಗರ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಮನೆಗಳ್ಳರನ್ನು ಬಂಧಿಸಲಾಗಿದೆ .ಬಂಧಿತರಿಂದ ನಗರದ ರಿಂಗ್ ರಸ್ತೆ ಸ್ವಾರಗೇಟ್ ನಗರದ ಒಂದು ಮನೆಯಲ್ಲಿ ಕಳ್ಳತನಮಾಡಿದ 85 ಗ್ರಾಂ ಚಿನ್ನ ,25 ಗ್ರಾಂ ಬೆಳ್ಳಿ ಮತ್ತು 25 ಸಾವಿರ ರೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾವಳಗಿಯಶೀಲವಂತ ಅಲಿಯಾಸ್ ಶಿವ್ಯಾ ಅಂಜಿರ್ಯಾ ಕಾಳೆ ( 23) , ಗಣೇಶ ಸಕಾರಾಮ ಪವಾರ (25) ಮತ್ತು ತಾಜ ಸುಲ್ತಾನಪುರದ ರಘು ಅಲಿಯಾಸ್ ರಗಲ್ಯಾ ಸೋಪ್ಯಾ ಪವಾರ ( 26) ಬಂಧಿತ ಆರೋಪಿಗಳು.
ಕಳ್ಳತನದಲ್ಲಿ ತಾಜಸುಲ್ತಾನಪುರದ ಮಲ್ಲಪ್ಪ ಗೌನ್ಯಾ ಕಾಳೆ ಎಂಬ ಮತ್ತೊಬ್ಬ ಆರೋಪಿ ಪಾಲ್ಗೊಂಡಿದ್ದ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಸಬ್ ಅರ್ಬನ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಬೇನಾಳ ಅವರ ನೇತೃತ್ವದಲ್ಲಿ ಹುಸೇನ್ ಬಾದಶಹಾ,ಅಶೋಕ,ವಿಶ್ವನಾಥ,ಮಂಜುನಾಥ,ರಾಜು ಟಾಕಳೆ,ಬೀರಣ್ಣ ಅವರ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದರು.