ಮೂವರು ಬೈಕ್ ಕಳ್ಳರ ಬಂಧನ:9 ಬೈಕ್ ವಶ

ಕಲಬುರಗಿ ನ 30: ನಗರದ ವಿವಿಧ ಭಾಗಗಳಲ್ಲಿ ದ್ವಿಚಕ್ರವಾಹನ (ಬೈಕ್) ಗಳನ್ನು ಕಳವು ಮಾಡುತ್ತಿದ್ದ ಮೂವರು ಕಳ್ಳರನ್ನು ನಗರ ಸಬ್ ಅರ್ಬನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2.15 ಲಕ್ಷ ರೂ ಮೌಲ್ಯದ 9 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುಲ್ತಾನಪುರ ರೋಡ್ ಕಮಲನಗರ ಕಾಲೋನಿ ನಿವಾಸಿಗಳಾದ ಶಿವರಾಜ ಬಸವರಾಜ ಜಮಾದಾರ (19),ಕಲ್ಯಾಣಿ ಸಾಯಿಬಣ್ಣ ನಿಂಬಾಳ( 21) ಮತ್ತು ದತ್ತು ಸುರೇಶ ವಾರಿಕ್ (21) ಎಂಬ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
ನಗರದ ಗಾಜಿಪುರ ನಿವಾಸಿ ವಿಶಾಲ ಸುಗೂರ ಎಂಬುವವರು ನ 23 ರಂದು ರಾಮತೀರ್ಥ ಮಂದಿರ ಹತ್ತಿರ ನಿಲ್ಲಿಸಿದ ತಮ್ಮ ಬೈಕ್ ಕಳುವಾದ ಬಗ್ಗೆ ನ 28 ಕ್ಕೆÀ ಸಬ್ ಅರ್ಬನ್ ಠಾಣೆಗೆ ದೂರು ಸಲ್ಲಿಸಿದ್ದರು.ಬೈಕ್ ಕಳ್ಳರ ಶೋಧಕ್ಕೆ ಮುಂದಾದ ಪೊಲೀಸರಿಗೆ ನ. 29 ರಂದು ಬೆಳಿಗ್ಗೆ ತಾಜಸುಲ್ತಾನಪುರ ಕ್ರಾಸ್ ಹತ್ತಿರ ಮೂವರು ಬೈಕ್ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.
ಸಬ್ ಅರ್ಬನ್ ಉಪವಿಭಾಗದ ಎಸಿಪಿ ಜೆ.ಎಚ್ ಇನಾಮದಾರ ಮಾರ್ಗದರ್ಶನದಲ್ಲಿ ,ಸಬ್ ಅರ್ಬನ್ ಠಾಣೆ ಪಿಐ ಭಾಸು ಚವ್ಹಾಣ ನೇತೃತ್ವದಲ್ಲಿ ಪಿಎಸ್‍ಐ ಕವಿತಾ ಚವ್ಹಾಣ, ಎಎಸೈ ಅಬ್ದುಲ್ ಜಬ್ಬಾರ, ಸಿಎಚ್ಸಿ ಪ್ರಕಾಶ,ಪಿಸಿಗಳಾದ ಅಂಬಾಜಿ,ಮಲ್ಲಿಕಾರ್ಜುನ,ಪ್ರಕಾಶ,ನಾಗೇಂದ್ರ, ಅನೀಲ, ಶಿವಾನಂದ ಅವರಿದ್ದ ತಂಡದವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಶೋಧ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಡಾ ವೈಎಸ್ ರವಿಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.