ಮೂವರು ಪತ್ರಕರ್ತರಿಗೆ ಪ್ರಶಸ್ತಿಗೆ ಭಾಜನ ಹೆಮ್ಮೆಯ ವಿಚಾರ

ಕೋಲಾರ,ಜ,೨೧- ಕೋಲಾರ ಜಿಲ್ಲೆಗೆ ಪ್ರಥಮವಾಗಿ ಮೂವರು ಪತ್ರಕರ್ತರು ಪ್ರಶಸ್ತಿಗಳಿಗೆ ಭಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರಿಂದ ಜಿಲ್ಲೆಯ ಇತರೆ ಉದಯನ್ಮೋಖ ಪತ್ರಕರ್ತರಿಗೆ ಪ್ರೇರಣೆ ಮತ್ತು ಸ್ಪೊರ್ತಿದಾಯಕವಾಗಲಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಭಿಪ್ರಾಯ ಪಟ್ಟರು,
ನಗರದ ಪತ್ರಕರ್ತರ ಭವನದಲ್ಲಿ ಪ್ರಶಸ್ತಿಗಳಿಗೆ ಭಾಜನರಾದ ಮೂವರು ಪತ್ರಕರ್ತರಿಗೆ ಆಯೋಜಿಸಿದ್ದ ಅಭಿನಂದನೆಯ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಕಳೆದ ೨೦ ವರ್ಷದ ಸಂಘದ ಆಡಳಿತದಲ್ಲಿ ಪ್ರಥಮವಾಗಿ ನೀಡಿರುವಂತ ವಾರ್ಷಿಕೋತ್ಸವ ಪ್ರಶಸ್ತಿಯಲ್ಲಿ ಮೂರು ಮಂದಿ ಪತ್ರಕರ್ತರು ಪ್ರಶಸ್ತಿ ಗಳಿಸಿರುವುದು ಪತ್ರಿಕಾ ಕ್ಷೇತ್ರದಲ್ಲಿ ಕೋಲಾರ ಜಿಲ್ಲೆಯ ಗಟ್ಟಿತನದ ಪ್ರದರ್ಶನದ ಜೂತೆಗೆ ಡಿ.ವಿ.ಗುಂಡಪ್ಪನವರ ತವರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು,
ಕೆ.ಎಸ್.ಚಂದ್ರಶೇಖರ್ ಅವರು ಪಟೇಲ್ ಬೈರಹನುಮ ಸೇರಿದಂತೆ ಈವರೆಗೆ ೮ ಪ್ರಶಸ್ತಿಗಳಿಗೆ ಭಜನರಾಗಿದ್ದಾರೆ. ಮೂಲತಃ ಜಿಲ್ಲಾ ಮಟ್ಟದ ಹೊನ್ನುಡಿ ದಿನಪತ್ರಿಕೆ,ರಾಜ್ಯ ಮಟ್ಟದ ಜನವಾಹಿನಿ ದಿನಪತ್ರಿಕೆ, ಈನಾಡು ಪತ್ರಿಕೆ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ದೂರದರ್ಶನ ಚಂದನ, ಕೋಲಾರ ಪ್ರಭ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಂಘಕ್ಕೆ ಜಾಗ ಮಂಜೂರಾತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು,
ಪ್ರಜಾವಾಣಿಯ ವರದಿಗಾರರಾದ ಓಂಕಾರಮೂರ್ತಿಯವರು ಮೈಸೂರಿನಲ್ಲಿ ಕೊರೋನಾ ಸಂದರ್ಭದಲ್ಲಿ ಮಾನವೀಯತೆ ಕುರಿತು ಬರೆದ ವರದಿಗೆ ರಾಜ್ಯ ವಾರ್ಷಿಕ ಪ್ರಶಸ್ತಿ ಲಭಿಸಿದೆ. ಕೋಲಾರಕ್ಕೆ ಭೀತಿಯಿಂದ ಅಗಮಿಸಿದವರು ಇಂದು ಎಲ್ಲರೊಂದಿಗೆ ಹೊಂದಿ ಕೊಂಡು ಸ್ನೇಹಮಯಿಯಾಗಿ ಮುಂದುವರೆಯುತ್ತಿದ್ದಾರೆ. ಕೋಲಾರದ ಬಗ್ಗೆ ತಾವು ಕೇಳಿದ್ದು ಸುಳ್ಳು ಎಂಬ ಅಭಿಪ್ರಾಯವನ್ನು ವ್ಯಕ್ತಪಡೆಸಿದ್ದಾರೆ ಎಂದರು,
ಇನ್ನು ಮುಳಬಾಗಿಲಿನ ವಿಜಯ ಕರ್ನಾಟಕದ ವರದಿಗಾರರಾದ ಪ್ರಕಾಶ್ ಅವರು ಕೃಷಿಯ ವರದಿಗೆ ಪ್ರಶಸ್ತಿ ಲಭಿಸಿದೆ. ಮೂಲತಃ ಶಿಕ್ಷಕರಾಗಿದ್ದರೂ ವೃತ್ತಿಯ ಬಗ್ಗೆ ಕಾಳಜಿ ಹೊಂದಿರುವುದು ಅಭಿನಂದನೀಯ ಸಂಗತಿಯಾಗಿದೆ. ತಾವು ಕಂಡಿದ್ದು ವರದಿಯ ರೂಪದಲ್ಲಿ ಎಲ್ಲರಿಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು,
ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ ಕೆ.ಎಸ್.ಚಂದ್ರಶೇಖರ್ ಅವರು ಮಾತು ಕಡಿಮೆ ಕೆಲಸ ಜಾಸ್ತಿ, ಜನ ಬಳಕೆ ಕಡಿಮೆ ಗಂಭೀರ ಸ್ವಾಭಾವದವರು, ತನಿಖಾ ವರದಿಗಳಲ್ಲಿ ಅವರಿಗೆ ಹೆಚ್ಚು ಆಸಕ್ತಿ ಹೊಂದಿದ್ದು, ಅಧಿಕಾರಿಗಳನ್ನು ನಡುಗಿಸುತ್ತಿದ್ದರು ಎಂಬುವುದಕ್ಕೆ ಹಲವು ಪ್ರಕರಣಗಳನ್ನು ಉದಾಹರಿಸಿದರು,
ಪ್ರಕಾಶ್ ಅವರು ಶಿಕ್ಷಕರಾಗಿ ಉಪವೃತ್ತಿ ಪತ್ರಿಕಾ ಕ್ಷೇತ್ರವನ್ನು ಆಯ್ಕೆ ಮಾಡಿ ಕೊಂಡು ಎರಡು ಕಡೆ ಕಾರ್ಯನಿರ್ವಹಿಸುತ್ತಾ ಪ್ರಶಸ್ತಿಗೆ ಭಜನರಾಗಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಹೇಳಿದರು,
ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಗೌರವಿಸಲಾಯಿತು, ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎಂ.ಜಿ.ಪ್ರಭಾಕರ್, ಬಿ.ಸುರೇಶ್, ಕೋನಾ ಮಂಜುನಾಥ್, ಸಚ್ಚಿತಾನಂದ, ಅಪ್ಪೋಜಿಗೌಡ, ಕೆ.ಬಿ.ಜಗಧೀಶ್, ಮಾಲೂರು ನಾರಾಯಣಸ್ವಾಮಿ ಮುಂತಾದವರು ಭಾಗವಹಿಸಿದ್ದರು,
ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಸ್ವಾಗತಿಸಿದರು, ಅಮರೇಶ್ ಸ್ವಾಗತಿಸಿ, ಮಂಜುನಾಥ್ ವಂದಿಸಿದರು,