ಮೂವರು ಕೊಲೆ ಆರೋಪಿಗಳ ಬಂಧನ

ವಿಜಯಪುರ, ಜೂ.2-ಯಾರೋ ಆರೋಪಿತರು ಯಾವುದೋ ಬಲವಾದ ಕಾರಣಕ್ಕಾಗಿ ಗ್ರಾಮದ ಬಸಪ್ಪ ತಂದೆ ರಾಮಣ್ಣ ದೇವನಾಯಕ ಇವರ ಜಮೀನದ ಬಾಂದಿನ ಬಾಜು ಕಲ್ಲಿನಿಂದ ಮತ್ತು ಚೂಪಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದ ಮೂರು ಜನ ಆರೋಪಿಗಳನ್ನು ತಿಕೋಟಾ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ದಿ.27.05.2021 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಹೋನವಾಡ ಗ್ರಾಮದ ಕಸ್ತೂರಿ ಗಂಡ ಅಂಬಣ್ಣ ಮಾಲಗಾರ ಸಾ. ಹೊನವಾಡ ಇವರು ತಿಕೋಟಾ ಪೆÇಲೀಸ ಠಾಣೆಯಲ್ಲಿ ದೂರು ನೀಡಿದ್ದರಲ್ಲಿ ತನ್ನ ಮಗ ದುಂಡಪ್ಪ ತಂದೆ ಅಂಬಣ್ಣ ಮಾಲಗಾರ (40) ವರ್ಷ ಇವನಿಗೆ ದಿ.26.05.2021 ರಂದು ರಾತ್ರಿ 12.00 ಗಂಟೆಯಿಂದ ದಿ.27.05.2021 ರ ಮುಂಜಾನೆ 06.00 ಗಂಟೆಯ ನಡುವಿನ ವೇಳೆಯಲ್ಲಿ ಫಿರ್ಯಾಧಿಯನ್ನು ಕೊಟ್ಟ ಮೇರೆಗೆ ತಿಕೋಟಾ ಪೆÇಲೀಸ್ ಠಾಣೆಯಲ್ಲಿ ಗುನ್ನೆ ನಂ: 73/2021 ಕಲಂ: 302 ರೆ/ವು 34 ಐಪಿಸಿ ನೇದ್ದಕ್ಕೆ ಪ್ರಕರಣವನ್ನು ದಾಖಲು ಮಾಡಿಕೊಂಡು, ತನಿಖೆ ಕೈಕೊಳ್ಳಲಾಗಿತ್ತು.
ಈ ಕುರಿತು ಎಸ್.ಪಿ ವಿಜಯಪುರ ರವರು ಆರ್.ಎಲ್.ಅರಸಿದ್ದಿ, ಹೆಚ್ಚುವರಿ ಪೆÇಲೀಸ ಅಧೀಕ್ಷಕರು ವಿಜಯಪುರ, ಕೆ.ಸಿ.ಲಕ್ಷ್ಮೀನಾರಾಯಣ ಡಿ.ಎಸ್.ಪಿ ವಿಜಯಪುರ ರವರ ಮಾರ್ಗದರ್ಶನದಲ್ಲಿ ಎಸ್.ಬಿ.ಪಾಲಭಾವಿ ಸಿಪಿಐ ವಿಜಯಪುರ ಗ್ರಾಮೀಣ ವೃತ್ತರವರ ನೇತೃತ್ವದಲ್ಲಿ ಎಸ್ ತಿಕೋಟಾ ಪಿಎಸ್, ಸಿಬ್ಬಂದಿಯವರಾದ ಆರ್ ಎಮ್ ಖಾನಾಪೂರ, ಎಮ್.ಎನ್.ಮುಜಾವರ, ಎಲ್.ಎಸ್.ಹಿರೇಗೌಡರ, ಎಸ್, ಎಮ್, ಹೋನಗೌಡ, ಎಸ್ ಎಸ್ ನಡುವಿನಮನಿ, ಎಮ್ ಬಿ ಜನಗೊಂಡ, ಎಮ್ ಎಚ್ ಇಟ್ಟೂರ, ಮಹೇಶ ಗಿರಡೆ, ಎಸ್ ಎನ್ ಹಿರೆಗೋಳ, ಸೋಮನಾಥ ಶಿವೂರ, ಬಿ ಎಲ್ ವಾಡೆದ, ಎಸ್ ಸಿ ನಾವಿ, ಶಿವಾನಂದ ಯಡಳ್ಳಿ, ಪರಸು ವಾಲಿಕಾರ ಇವರವನ್ನೊಳಗೊಂಡ ತಂಡವನ್ನು ರಚಿಸಿದ್ದು, ಈ ತನಿಖಾ ತಂಡವು ಈ ಪ್ರಕರಣದಲ್ಲಿ ಸೂಕ್ತ ಕಾರ್ಯಚರಣೆ ನಡೆಯಿಸಿ ಚಾಣಾಕ್ಷತನದಿಂದ ಪ್ರಕರಣ ಪತ್ತೆ ಹಚ್ಚಿದ್ದು, ಇದರಲ್ಲಿಯ ಆರೋಪಿತನಾದ ಮೃತನ ಖಾಸ ತಮ್ಮ ಸದಾಶಿವ ಮಾಲಗಾರ ಆತನು ಮೃತನ ಹೆಂಡತಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಇದಕ್ಕೆ ಮೃತನು ಅಡ್ಡಿಯಾಗುತ್ತಿದ್ದರಿಂದ ಕೊಲೆಗೈಯ್ಯಲಾಗಿದೆ ಎಂದು ಪೋಲಿಸ್ ಪ್ರಕಟಣೆ ತಿಳಿಸಿದೆ.
ಬಂಧಿತ ಈ ಮೂರು ಜನ ಆರೋಫಿತರು ಕೂಡಿ ಒಳಸಂಚು ಮಾಡಿ ಕೊಲೆ ಮಾಡಿದ್ದು, ತನಿಖೆಯಲ್ಲಿ ತಿಳಿದು ಬಂದಿದ್ದು, 1) ಸದಾಶಿವ ತಂದೆ ಅಂಬಣ್ಣ ಮಾಲಗಾರ 2) ಗೈಬುಸಾಬ ತಂದೆ ರಾಜೇಸಾಬ @ ಮೋದಿನಸಾಬ ತಿಗಣಿಬಿದರಿ 3) ಪಲ್ಲವಿ ಗಂಡ ದುಂಡಪ್ಪ ಮಾಲಗಾರ ಸಾ. ಎಲ್ಲರೂ ಹೊನವಾಡ ಇವರನ್ನು ಇಂದು ದಿ. 31.05.2021 ರಂದು ಬಂಧಿಸಲಾಗಿದೆ. ಬಂಧಿತ ಆರೋಪಿತರಿಂದ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾದ ತಂಡದ ಕಾರ್ಯಾಚರಣೆಯನ್ನು ಮೆಚ್ಚಿ ಪೋಲಿಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲರವರು ಶ್ಲಾಘಿಸಿದ್ದಾರೆ.