ಮೂವರು ಕಳ್ಳರ ಬಂಧನ

ರಾಯಚೂರು.ನ.16-ಲ್ಯಾಪ್ ಟಾಪ್ ಸೇರಿದಂತೆ ವಿವಿಧ ತತ್ಸಂಬಂಧಿತ ವಸ್ತುಗಳನ್ನು ಕಳುವು ಮಾಡಿದ ಅರೋಪದಡಿ ಮೂವರನ್ನು ಬಂಧಿಸಿದ ಒಟ್ಟು 1,12 ಲಕ್ಷ ವೆಚ್ಚದ ಸಲಕರಣೆಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ನಿಕಮ್ ಪ್ರಕಾಶ ಅಮ್ರಿತ್, ಹೆಚ್ಚುವರಿ ಎಸ್‌ಪಿ ಹರಿಬಾಬು, ಡಿಎಸ್‌ಪಿ ಶಿವನಗೌಡ ಅವರ ಮಾರ್ಗದರ್ಶನ ದಲ್ಲಿ ಸದಾರ ಬಜಾರ್ ಠಾಣೆಯ ಫಸಿಯುದ್ದೀನ್ ಅವರ ನೇತೃತ್ವದ ತಂಡ ನಡೆಸಿದ ಕಾರ್ಯಚರಣೆ ಬಲೆಗೆ ಮೂವರು ಸಿಕ್ಕಿ ಬಿದ್ದಾರೆ. ಆರೋಪಿಗಳನ್ನು ಮಹ್ಮದ್ ಜಾಫರ್, ಮಹ್ಮದ ಖಾಜ ಹಾಗೂ ಮುಜಿಬ್ ಚೌದರಿ ಎಂದು ಗುರುತಿಸಲಾಗಿದೆ.
ನಗರದ ಅಟೋ ನಗರದಲ್ಲಿರುವ ಮೊಹ್ಮದ್ ಅಲಿ ಅವರ ಅಣ್ಣನ ಅಂಗಡಿಯಲ್ಲಿ ಲ್ಯಾಪ್ ಟಾಪ್ ಸೇರಿ ವಿವಿಧ ಉಪಕರಣಗಳು ಕಳುವು ಮಾಡಲಾಗಿತ್ತು.